ಬೇಸಿಗೆಯ ತಾಪಮಾನ ಜನರನ್ನಷ್ಟೇ ಅಲ್ಲದೇ ಪ್ರಾಣಿಗಳನ್ನು ಕಾಡುತ್ತಿದೆ. ನೀರಿಗಾಗಿ ಪ್ರಾಣಿಗಳು ಪರದಾಡುವುದು ಸಾಮಾನ್ಯವಾಗಿದೆ. ಇದಕ್ಕೊಂದು ಹಸಿಹಸಿ ಉದಾಹರಣೆ ಇಲ್ಲಿದೆ.
ಮಹಾರಾಷ್ಟ್ರದ ಮಲ್ಶೇಜ್ ಘಾಟ್‌ನಲ್ಲಿ ಮಂಗವೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಮುಂದಾದಾಗ ಪೊಲೀಸರು ನೆರವಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಕರಗಿ, ಪೊಲೀಸಪ್ಪನನ್ನು ಕೊಂಡಾಡಿದ್ದಾರೆ.
30 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ, ಕೋತಿಯು ಎರಡು ಕಾಲಿನಲ್ಲಿ ನಿಂತುಕೊಂಡು ಪೊಲೀಸ್ ಸಿಬ್ಬಂದಿ ಸಂಜಯ್ ನೀಡಿದ ಬಾಟಲಿಯಿಂದ ನೀರು ಕುಡಿಯುತ್ತಿರುವುದು ಕಂಡುಬುತ್ತದೆ.
ಪಠ್ಯ ಪುಸ್ತಕದಲ್ಲಿ ವರದಕ್ಷಿಣೆ ಪ್ರಯೋಜನಗಳ ಪಟ್ಟಿ ; ರೊಚ್ಚಿಗೆದ್ದ ಟ್ವೀಟಿಗರು
ನಿಧಾನವಾಗಿ ಕೋತಿಗೆ ನೀರು ನೀಡುತ್ತಿರುವುದನ್ನು ಕಾಣಬಹುದಾಗಿದ್ದು, ಇದೇ ವೇಳೆ ಕಾರೊಂದು ಹಾದು ಹೋಗುತ್ತಿರುವಾಗ ಕೋತಿಯು ಹಿಂದಕ್ಕೆ ನೋಡುತ್ತಾ ನೀರು ಕುಡಿಯುವುದನ್ನು ಮುಂದುವರೆಸಿದೆ.
ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಟ್ವಿಟ್ಟರ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ಮತ್ತು “ಸಾಧ್ಯವಾದಲ್ಲೆಲ್ಲಾ ದಯೆತೋರಿಸಿ” ಎಂದು ಶೀರ್ಷಿಕೆ ನೀಡಿದ್ದಾರೆ.
ಪೊಲೀಸ್ ಕಾನ್ಸ್ಟೆಬಲ್ ಸಂಜಯ್ ಅವರು ಜಾಲತಾಣದಲ್ಲಿ ಪ್ರಶಂಸೆ ಗಳಿಸಿದ್ದಾರೆ. ನೂರಾರು ಮಂದಿ ಶ್ಲಾಘಿಸಿ ಪ್ರತಿಕ್ರಿಯೆ ನೀಡಿದ್ದಾರೆ.