ಡೆಹ್ರಾಡೂನ್: 78 ವರ್ಷದ ವೃದ್ಧೆಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ.
ದೇಶಕ್ಕೆ ರಾಹುಲ್ ಅವರ ಅಗತ್ಯವಿದೆ ಎಂದು ಹೇಳಿರುವ ಅವರು, 50 ಲಕ್ಷ ಮೌಲ್ಯದ ಆಸ್ತಿ ಮತ್ತು 10 ತೊಲ ಚಿನ್ನಾಭರಣ ಸೇರಿದಂತೆ ತಮ್ಮ ಎಲ್ಲಾ ಆಸ್ತಿಯನ್ನು ಅವರಿಗೆ ವರ್ಗಾಯಿಸಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ ಮೂಲದ ವೃದ್ಧೆಯನ್ನು ಪುಷ್ಪಾ ಮುಂಜಿಯಾಲ್ ಎಂದು ಗುರುತಿಸಲಾಗಿದೆ.
ಪುಷ್ಪಾ ಡೆಹ್ರಾಡೂನ್ ನ್ಯಾಯಾಲಯದಲ್ಲಿ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ವಿಚಾರಗಳು ದೇಶಕ್ಕೆ ಅಗತ್ಯವಿದೆ ಎಂದು ಪುಷ್ಪಾ ಮುಂಜಿಯಾಲ್ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರ ಆಲೋಚನೆಗಳಿಂದ ತಾನು ತುಂಬಾ ಪ್ರಭಾವಿತಳಾಗಿದ್ದೇನೆ. ಅದಕ್ಕಾಗಿಯೇ ತನ್ನ ಆಸ್ತಿಯನ್ನು ಅವರಿಗೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ಪುಷ್ಪಾ ಮುಂಜಿಯಲ್ ಅವರು ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಲಾಲಚಂದ್ ಶರ್ಮಾ ತಿಳಿಸಿದ್ದಾರೆ.