ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಪ್ರಸಿದ್ಧ ದಾಲ್ ಸರೋವರದ ಮೇಲೆ ಕಾಶ್ಮೀರದ ಮೊದಲ ತೇಲುವ ಹ್ಯಾಮ್ಲೆಟ್ ಅನ್ನು ಸ್ಥಾಪಿಸಿದೆ. ಇದನ್ನು ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅರ್ಪಿಸಿದೆ.
ಕಚ್ರಿ ಮೊಹಲ್ಲಾವನ್ನು ಮಾದರಿ ಪ್ರವಾಸಿ ತೇಲುವ ಗ್ರಾಮವನ್ನಾಗಿ ಪ್ರಾರಂಭಿಸಲಾಗಿದೆ ಎಂದು ಜನರಲ್ ಆಫೀಸರ್ ಕಮಾಂಡಿಂಗ್, ಚಿನಾರ್ ಕಾರ್ಪ್ಸ್, ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ ಮತ್ತು ಕಾಶ್ಮೀರದ ವಿಭಾಗೀಯ ಆಯುಕ್ತ ಪಾಂಡುರಂಗ್ ಕೆ.ಪೋಲ್ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಪಾಂಡೆ ಅವರು ಮಾತನಾಡಿ, ದಾಲ್ ಸರೋವರವು ಕಾಶ್ಮೀರ ಕಿರೀಟದ ರತ್ನವಾಗಿದೆ. ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಕಚ್ರಿ ಮೊಹಲ್ಲಾ ಮಾದರಿಯನ್ನು ಇನ್ನೂ ಐದು ಕುಗ್ರಾಮಗಳಲ್ಲಿ ಪುನರಾವರ್ತಿಸಲಾಗುವುದು. ಹಾಗೂ ಎಲ್ಲಾ 55 ಕುಗ್ರಾಮಗಳನ್ನು ಸೇರಿಸಲು ಕ್ರಮೇಣ ವಿಸ್ತರಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಪಾಂಡೆ ಹೇಳಿದ್ದಾರೆ. ಕಚ್ರಿ ಮೊಹಲ್ಲಾದ ನಿವಾಸಿಗಳು ಸರ್ಕಾರ ಮತ್ತು ಸೇನೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.