alex Certify ಮದುವೆಯಲ್ಲಿ ವಧು – ವರನಿಗೆ ಕೊಟ್ಟ ಜ್ಯೂಸ್‍ನಲ್ಲಿ ಏನಿತ್ತು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಲ್ಲಿ ವಧು – ವರನಿಗೆ ಕೊಟ್ಟ ಜ್ಯೂಸ್‍ನಲ್ಲಿ ಏನಿತ್ತು ಗೊತ್ತಾ..?

ಇದೀಗ ಭಾರತದಲ್ಲಿ ಮದುವೆಯ ಪರ್ವ ಶುರುವಾಗಿದೆ. ಕೋವಿಡ್ ನಿರ್ಬಂಧಗಳಿಂದಾಗಿ ಮುಂದೂಡಲ್ಪಟ್ಟಿದ್ದ ವಿವಾಹ ಸಮಾರಂಭಗಳು ಇದೀಗ ನೆರವೇರುತ್ತಿದೆ. ಮೋಜು, ತಮಾಷೆ ಮುಂತಾದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಕೂಡ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.

ವಿವಾಹ ಸಮಾರಂಭದಲ್ಲಿ ಹೆಚ್ಚಾಗಿ ಸ್ನೇಹಿತರು ನವವಿವಾಹಿತರ ಮೇಲೆ ಚೇಷ್ಟೆಗಳನ್ನು ಮಾಡುತ್ತಾರೆ. ವಧು-ವರನ ಇಬ್ಬರು ಸ್ನೇಹಿತರು ಅವರಿಗೆ ಕುಡಿಯಲು ಕೂಲ್ ಡ್ರಿಂಕ್ಸ್ ನೀಡಿದ್ದಾರೆ. ಮ್ಯಾಂಗೋ ಸ್ಲೈಸ್ ಪ್ಯಾಕ್‍ಗೆ ಸಿರಿಂಜ್ ಮುಖಾಂತರ ಆಲ್ಕೋಹಾಲ್ ಸೇರಿಸಿದ್ದಾರೆ. ನಂತರ ಅದನ್ನು ವರನಿಗೆ ಕುಡಿಯಲು ನೀಡಿದ್ದಾರೆ. ಜ್ಯೂಸ್ ಎಂದು ಕುಡಿದ ವರನಿಗೆ ಇದಕ್ಕೆ, ಆಲ್ಕೋಹಾಲ್ ಬೆರೆಸಲಾಗಿದೆ ಎಂಬುದನ್ನು ಕೂಡಲೇ ಅರಿತುಕೊಂಡಿದ್ದಾನೆ. ಕುಡಿಯುವುದನ್ನು ಅರ್ಧಕ್ಕೆ ಬಿಟ್ಟು ಆತ ನಗೆ ಬೀರಿದ್ದಾನೆ. ಬಳಿಕ ವಧುವಿಗೆ ನೀಡಿದ್ದಾರೆ. ಆದರೆ ಆಕೆಯ ರಿಯಾಕ್ಷನ್ ಹೇಗಿತ್ತು ಅನ್ನೋದನ್ನು ಸೆರೆ ಹಿಡಿದಿಲ್ಲ.

ಈ ವಿಡಿಯೋವನ್ನು ಬ್ರೈಡ್ಸ್ ಸ್ಪೆಷಲ್ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ತಮಾಷೆ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...