ನವದೆಹಲಿ: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಬೆಳಕು ಚೆಲ್ಲುತ್ತಿರುವುದನ್ನು ಅದ್ಭುತವಾದ ದೃಶ್ಯಾವಳಿ ಕಂಡು ಬಂದಿದ್ದು, ಇದು ಉಲ್ಕಾಪಾತದಂತೆ ಕಾಣುತ್ತದೆ.
ಅದ್ಭುತ ದೃಶ್ಯವನ್ನು ಅನೇಕರು ವೀಕ್ಷಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರ ಮತ್ತು ಮಧ್ಯಪ್ರದೇಶದ ಝಬುವಾ, ಬರ್ವಾನಿ ಜಿಲ್ಲೆಗಳಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಉಲ್ಕೆಗಳು ರಾತ್ರಿಯ ಆಕಾಶದಲ್ಲಿ ನೋಡುವ ಬೆರಗುಗೊಳಿಸುವ ಬೆಳಕಿನ ಪ್ರಕಾಶಮಾನವಾದ ಗೆರೆಗಳಾಗಿವೆ.
ಸಾಮಾನ್ಯವಾಗಿ ‘ಶೂಟಿಂಗ್ ಸ್ಟಾರ್ಸ್’ ಎಂದು ಕರೆಯಲ್ಪಡುವ ಉಲ್ಕೆಗಳು ಕಲ್ಲಿನ ವಸ್ತುಗಳಾಗಿವೆ, ಅವು ಭೂಮಿಯ ವಾತಾವರಣವನ್ನು ಪ್ರಚಂಡ ವೇಗದಲ್ಲಿ ಪ್ರವೇಶಿಸುತ್ತವೆ. ಭೂಮಿಯು, ಸೂರ್ಯನ ಸುತ್ತ ತನ್ನ ವಾರ್ಷಿಕ ಪ್ರಯಾಣದಲ್ಲಿ ಬಾಹ್ಯಾಕಾಶದಲ್ಲಿ ಧೂಳಿನ ಪ್ರದೇಶದ ಮೂಲಕ ಹಾದುಹೋಗುವಾಗ, ಸಣ್ಣ ಕಲ್ಲಿನ ವಸ್ತುಗಳು ವಾತಾವರಣವನ್ನು ಹೆಚ್ಚಿನ ವೇಗದಲ್ಲಿ ಪ್ರವೇಶಿಸುತ್ತವೆ. ಸೆಕೆಂಡಿಗೆ 30 ರಿಂದ 60 ಕಿಮೀ ನಡುವೆ ಸಂಚರಿಸುವ ಇವನ್ನು ಉಲ್ಕಾಪಾತ ಎಂದು ಕರೆಯಲಾಗುತ್ತದೆ. ಇವು ಬೆಳಕಿನ ಗೆರೆಗಳ ಮಳೆಯನ್ನು ಉಂಟುಮಾಡುತ್ತವೆ.
ಉಜ್ಜಯಿನಿಯ 300 ವರ್ಷಗಳಷ್ಟು ಹಳೆಯದಾದ ಜಿವಾಜಿ ವೀಕ್ಷಣಾಲಯದ ಅಧೀಕ್ಷಕ ರಾಜೇಂದ್ರ ಗುಪ್ತಾ, ಇದು ಉಲ್ಕಾಪಿಂಡ್(ಉಲ್ಕಾಶಿಲೆಗಳು) ಎಂದು ತೋರುತ್ತದೆ. ಅವುಗಳ ಪತನ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.