ಕಣ್ಮರೆಯಾಗಿದ್ದ 492 ಸಂಖ್ಯೆಯ ಆಫ್ರಿಕನ್ ಫ್ಲೆಮಿಂಗೋ ಮತ್ತೊಮ್ಮೆ ಪ್ರತ್ಯಕ್ಷವಾಗಿದೆ. ಸುಮಾರು 17 ವರ್ಷಗಳ ಹಿಂದೆ ಅಮೆರಿಕದ ಕಾನ್ಸಾಸ್ನಲ್ಲಿರುವ ಮೃಗಾಲಯದಿಂದ ಪರಾರಿಯಾಗಿದ್ದ ಈ ಪಕ್ಷಿಯು ದಕ್ಷಿಣಕ್ಕೆ 700 ಮೈಲಿಗಳಷ್ಟು ದೂರವಿರುವ ಟೆಕ್ಸಾಸ್ನಲ್ಲಿ ಕಾಣಿಸಿಕೊಂಡಿದೆ.
ಟೆಕ್ಸಾಸ್ ಅಧಿಕಾರಿಗಳಿಂದ ಪಿಂಕ್ ಫ್ಲಾಯ್ಡ್ ಎಂದು ಕರೆಯಿಸಿಕೊಳ್ಳುತ್ತಿದ್ದ ಈ ಪಕ್ಷಿಯು ಸೆಡ್ವ್ಗಿಕ್ ಕೌಂಟಿ ಮೃಗಾಲಯದಿಂದ ಎಸ್ಕೇಪ್ ಆಗಿತ್ತು.
ಎಮರ್ಜೆನ್ಸಿ ಬೆನ್ನಲ್ಲೇ ದೇಶಾದ್ಯಂತ ಕರ್ಫ್ಯೂ ಜಾರಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಶ್ರೀಲಂಕಾದಲ್ಲಿ ಪ್ರತಿಭಟನೆ ಹತ್ತಿಕ್ಕಲು ಕ್ರಮ
ಕಾಡಿನಲ್ಲಿ ಫ್ಲೆಮಿಂಗೋದ ಬದುಕುಳಿಯುವಿಕೆಯು ಹೆಚ್ಚು ಅಸಂಭವವಾಗಿದೆ. ಮತ್ತೊಂದು ಫ್ಲೆಮಿಂಗೋ, ನಂ 347 ಕೂಡ ಮೃಗಾಲಯದಿಂದ ಪರಾರಿಯಾಗಿತ್ತು. ಇದು ಇಂದಿಗೂ ಪತ್ತೆಯಾಗಿಲ್ಲ. ಆದರೆ ಮೀನುಗಾರಿಕಾ ಮಾರ್ಗದರ್ಶಿ ಡೇವಿಡ್ ಫೋರ್ ಮ್ಯಾನ್ 482 ಸಂಖ್ಯೆಯ ಫ್ಲೆಮಿಂಗೋವನ್ನು ಪತ್ತೆ ಮಾಡಿದ್ದಾರೆ.
ಟೆಕ್ಸಾಸ್ನ ಗಲ್ಫ್ ಕರಾವಳಿಯ ಬಂದರು ಲಾವಾಕಾದಲ್ಲಿ ಸ್ನೇಹಿತನೊಂದಿಗೆ ಮೀನುಗಾರಿಕೆಗೆ ಹೊರಟಿದ್ದ ಫೋರ್ಮ್ಯಾನ್, ಗಾರ್ಡಿಯನ್ ಬಳಿ ಪೂರ್ವ ಕರಾವಳಿಯಿಂದ ಬಿಳಿ ಪೆಲಿಕಾನ್ಗಳ ಗುಂಪು ಚಳಿಗಾಲಕ್ಕೆ ಇಲ್ಲಿಗೆ ಬರುವುದನ್ನು ನಾನು ನಿರೀಕ್ಷಿಸುತ್ತಿದ್ದೆ ಎಂದು ಹೇಳಿದ್ದಾರೆ.