ನಿನ್ನೆ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ನಡೆದ ಐಪಿಎಲ್ ನ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಉಮೇಶ್ ಯಾದವ್ 4 ವಿಕೆಟ್ ಪಡೆದುಕೊಂಡರೆ ಆ್ಯಂಡ್ರೆ ರಸೆಲ್ 31 ಎಸೆತಗಳಲ್ಲಿ 70ರನ್ ಗಳಿಸುವ ಮೂಲಕ ಕೆಕೆಆರ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ 4000ರನ್ ಗಳ ಗಡಿ ಮುಟ್ಟಿದ್ದಾರೆ.
ಐಪಿಎಲ್ ನಲ್ಲಿ 154 ಪಂದ್ಯಗಳನ್ನಾಡಿರುವ ಅಜಿಂಕ್ಯ ರಹಾನೆ ಇದುವರೆಗೂ 28 ಅರ್ಧಶತಕ ಹಾಗೂ 2 ಶತಕ ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರಿಂದ ಅಷ್ಟೇನೂ ಉತ್ತಮ ಪ್ರದರ್ಶನ ದೊರೆಯದೇ ಇದ್ದರು ಈ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಐಪಿಎಲ್ ನಲ್ಲಿ 4000ರನ್ ಪೂರೈಸಿದ 9ನೇ ಆಟಗಾರರಾಗಿದ್ದಾರೆ.