ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹಣ್ಣುಗಳನ್ನು ಪ್ರತಿ ದಿನ ತಿನ್ನಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಈ ಹಣ್ಣುಗಳನ್ನು ಯಾವಾಗ ತಿನ್ನಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ಬೇಕಾ? ಊಟವಾದ್ಮೇಲೆ ತಿನ್ನಬೇಕಾ ಎಂಬ ಪ್ರಶ್ನೆಗೆ ವೈದ್ಯ ಡಾ. ಅಚ್ಯುತನ್ ಈಶ್ವರ್ ಉತ್ತರ ನೀಡಿದ್ದಾರೆ. ಅವರ ಪ್ರಕಾರ ಹಣ್ಣನ್ನು ಯಾವಾಗ ಬೇಕಾದ್ರೂ ಸೇವನೆ ಮಾಡ್ಬಹುದು, ಆದ್ರೆ ಪ್ರತಿ ಊಟದ ಆರಂಭದಲ್ಲಿ ಹಣ್ಣು ತಿನ್ನುವುದು ಒಳ್ಳೆಯದು ಎನ್ನುತ್ತಾರೆ ಅವರು.
ಇದು ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ ಎನ್ನುತ್ತಾರೆ ಅವರು. ರಾತ್ರಿಗಿಂತ ಹಗಲಿನ ಸಮಯದಲ್ಲಿ ಹಣ್ಣು ತಿನ್ನುವುದು ಒಳ್ಳೆಯದು ಎನ್ನುತ್ತಾರೆ ಅವರು. ದಿನಕ್ಕೆ ಮೂರು ಹಣ್ಣು ತಿನ್ನಬೇಕು. ಅದಕ್ಕಿಂತ ಕಡಿಮೆ ತಿಂದರೆ ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ನೀವು ಅದಕ್ಕಿಂತ ಹೆಚ್ಚು ತಿಂದರೆ, ಯಾವುದೇ ಹೆಚ್ಚುವರಿ ಪ್ರಯೋಜನವಿಲ್ಲ ಎನ್ನುತ್ತಾರೆ ವೈದ್ಯರು.
ನೀವು ಸಸ್ಯ ಆಧಾರಿತ ಆಹಾರವನ್ನು ಸೇವನೆ ಮಾಡ್ತಿದ್ದರೆ ಅದಕ್ಕಿಂತ ಮೊದಲು ಹಣ್ಣು ತಿನ್ನುವುದು ಒಳ್ಳೆಯದು. ಭೋಜನದ ಆರಂಭದಲ್ಲಿ ಒಂದರಿಂದ ಎರಡು ಹಣ್ಣು ತಿಂದಲ್ಲಿ ನೀವು ಆರೋಗ್ಯವಾಗಿರಬಹುದು ಎನ್ನುತ್ತಾರೆ ವೈದ್ಯರು.