ನವದೆಹಲಿ: ಯುಗಾದಿ ಹಬ್ಬದ ಹೊತ್ತಲ್ಲೇ ದೇಶದ ಜನತೆಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಎಲ್.ಪಿ.ಜಿ. ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇಂದಿನಿಂದ ಅಡುಗೆ ಅನಿಲ ಬೆಲೆ 250 ರೂ.ನಷ್ಟು ಏರಿಕೆಯಾಗಿದೆ.
ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ಏಪ್ರಿಲ್ 1 ರಿಂದ 250 ರೂ. ಕ್ಕಿಂತ ಹೆಚ್ಚಿಸಲಾಗಿದೆ. ಶುಕ್ರವಾರ ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 2,253 ಕ್ಕೆ ಏರಿದೆ. ಕಳೆದ ಎರಡು ತಿಂಗಳಲ್ಲಿ, 19-ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯು ಸಿಲಿಂಡರ್‌ಗೆ 346 ರೂ. ರಷ್ಟು ಏರಿಕೆಯಾಗಿದೆ. 2253 ರೂ.ಗೆ ತಲುಪಿದೆ. ಈ ಹಿಂದೆ ಮಾರ್ಚ್ 1 ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ದರವನ್ನು 105 ರೂ. ಹೆಚ್ಚಿಸಲಾಯಿತು. ನಂತರ ಮಾರ್ಚ್ 22 ರಂದು ಅದರ ಬೆಲೆ 9 ರೂ.ನಷ್ಟು ಕಡಿಮೆಯಾಗಿದೆ.
ಆದರೆ ಈ ಬೆಲೆ ಏರಿಕೆ ಆಗಿರುವುದು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಅಲ್ಲ, ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳಲ್ಲಿ ಎಂಬುದನ್ನು ಗಮನಿಸಬೇಕಿದೆ.