ಮೈ ಜುಮ್ಮೆನ್ನಿಸುವಂಥ ಸುದ್ದಿ ಇದು. ಬಾಲಕಿಯ ಕಿವಿಯಿಂದ ಏಡಿ ಹೊರಬರುವ ವಿಡಿಯೋ ಕೂಡ ಇದೆ. ಇದನ್ನು ನೋಡುವ ಮುನ್ನ ಗುಂಡಿಗೆ ಗಟ್ಟಿ ಮಾಡ್ಕೊಳ್ಳಿ. ಪೋರ್ಟೊರಿಕೋದ ಸ್ಯಾನ್ ಜುವಾನ್ ನಲ್ಲಿ ನಡೆದಿರೋ ಘಟನೆ ಇದು.
ಬಾಲಕಿಯೊಬ್ಬಳು ಸಮುದ್ರದಲ್ಲಿ ಸ್ನಾರ್ಕ್ಲಿಂಗ್ ಗೆ ತೆರಳಿದ್ಲು. ಈ ವೇಳೆ ಜೀವಂತ ಏಡಿಯೊಂದು ಅವಳ ಕಿವಿಯೊಳಗೆ ಹೊಕ್ಕಿಬಿಟ್ಟಿದೆ. ಚಿಕ್ಕ ಮರಿಯಾಗಿದ್ದರಿಂದ ಆರಾಮಾಗಿ ಕಿವಿಯೊಳಗೆ ತೂರಿಕೊಂಡುಬಿಟ್ಟಿದೆ.
ಕಿವಿಯೊಳಗೆ ಹೊಕ್ಕಿದ್ದ ಏಡಿ ಅತ್ತಿಂದಿತ್ತ ಸರಿದಾಡಿದೆ. ಬಾಲಕಿ ನೋವು ಮತ್ತು ಕಿರಿಕಿರಿಯಿಂದ ಒದ್ದಾಡಿ ಹೋಗಿದ್ದಾಳೆ. ಕೂಡಲೇ ಜೊತೆಗಿದ್ದ ಸ್ನೇಹಿತೆ ಅವಳ ಸಹಾಯಕ್ಕೆ ಬಂದಿದ್ದಾಳೆ. ಪ್ಲಕ್ಕರ್ ಸಹಾಯದಿಂದ ಏಡಿಯನ್ನು ಕಿವಿಯಿಂದ ಹೊರಕ್ಕೆ ಎಳೆದಿದ್ದಾಳೆ.
ತನ್ನ ಕಿವಿಯಲ್ಲಿ ಏಡಿ ಇರಬಹುದು ಅನ್ನೋ ಕಲ್ಪನೆಯೂ ಬಾಲಕಿಗೆ ಇರಲಿಲ್ಲ. ಏಡಿಯನ್ನು ಹೊರಕ್ಕೆ ಎಳೆಯುತ್ತಿದ್ದಂತೆ ಅದೇನು ಅಂತಾ ಆಕೆ ಜೋರಾಗಿ ಕೂಗಿಕೊಂಡ್ಳು. ಅಷ್ಟೇ ಅಲ್ಲ ಜೀವಂತ ಏಡಿ ಕಿವಿಯಿಂದ ಹೊರಬರ್ತಿದ್ದಂತೆ ಬಾಲಕಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ. ಟಿಕ್‌ಟಾಕ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸುಮಾರು 15 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.
https://www.youtube.com/watch?v=4gP-0_RND48