alex Certify ʼದಿ ಕಾಶ್ಮೀರ್​ ಫೈಲ್ಸ್ʼ​ ಸಿನಿಮಾ ಕುರಿತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದಿ ಕಾಶ್ಮೀರ್​ ಫೈಲ್ಸ್ʼ​ ಸಿನಿಮಾ ಕುರಿತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಹತ್ವದ ಹೇಳಿಕೆ

ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ʼದಿ ಕಾಶ್ಮೀರ್​ ಫೈಲ್ಸ್ʼ​ ಸಿನಿಮಾದ ಬಗ್ಗೆ ಚರ್ಚೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮಾವೇಶವೊಂದರಲ್ಲಿ ಈ ಸಿನಿಮಾದ ವಿಚಾರವಾಗಿ ಮಾತನಾಡಿದ್ದು, ವಿಪಕ್ಷಗಳು ಸಿನಿಮಾಗೆ ರಾಜಕೀಯ ಬಣ್ಣವನ್ನು ಬಳಿಯಲು ಯತ್ನಿಸುತ್ತಿವೆ. ಈ ಸಿನಿಮಾದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದರು.

ʼದಿ ಕಾಶ್ಮೀರ್​ ಫೈಲ್ಸ್ʼ​ ಸಿನಿಮಾವನ್ನು ಜನರು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. ಈ ಸಿನಿಮಾಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ದುರಾದೃಷ್ಟವಶಾತ್​ ನಮ್ಮ ದೇಶದಲ್ಲಿನ ಜನರು ಈ ಪ್ರವೃತ್ತಿಯನ್ನು ಹೊಂದಿದ್ದಾರೆ. ಎಲ್ಲವನ್ನೂ ರಾಜಕೀಯಗೊಳಿಸುವುದು ಹಾಗೂ ವಿವಾದವನ್ನು ಹುಟ್ಟಿಸುವುದೇ ಇವರ ಕೆಲಸ ಎಂದು ಹೇಳಿದರು.

ಈ ಸಿನಿಮಾವು ಜಮ್ಮು ಮತ್ತು ಕಾಶ್ಮೀರದಿಂದ ಕಾಶ್ಮೀರಿ ಪಂಡಿತರ ವಲಸೆಯನ್ನು ತೋರಿಸಿದೆ. ಆ ಸಮಯದಲ್ಲಿ ನಡೆದ ಘಟನೆಯ ನೈಜತೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳು ಈ ಸಿನಿಮಾವನ್ನು ಟೀಕಿಸುತ್ತಿವೆ ಎಂದು ಹೇಳಿದರು.

ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿನಿಮಾದ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಕೇಂದ್ರದಲ್ಲಿ 8 ವರ್ಷ ಸರ್ಕಾರವಿದೆ, ಇಲ್ಲಿಯವರೆಗೆ ಕಾಶ್ಮೀರಿ ಪಂಡಿತರಿಗಾಗಿ ಏನು ಮಾಡಿದ್ದಾರೆ ಎಂದು ಕೇಜ್ರಿವಾಲ್ ಬಿಜೆಪಿಯನ್ನು ಕೇಳಿದ್ದರು. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯವನ್ನು ಬಿಜೆಪಿ ರಾಜಕೀಯಗೊಳಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

— Vivek Ranjan Agnihotri (@vivekagnihotri) March 31, 2022

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...