ಸಾಮಾನ್ಯವಾಗಿ ಮಹಿಳೆಯರೆಲ್ಲ ಶಾಪಿಂಗ್ ಪ್ರಿಯರೇ ಆಗಿರ್ತಾರೆ. ಮದುವೆ, ಪಾರ್ಟಿ ಯಾವುದೇ ಸಮಾರಂಭ ಇರಲಿ ಪ್ರತಿ ಬಾರಿಯೂ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಅನ್ನೋದು ಅವರ ಆಸೆಯಾಗಿರುತ್ತದೆ. ಆದ್ರೆ ಇಲ್ಲೊಬ್ಬ ಮಹಿಳೆ ಎಲ್ಲಾ ಮದುವೆ ಸಮಾರಂಭಗಳಿಗೂ ಒಂದೇ ಡ್ರೆಸ್ ಧರಿಸಿ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಪಾರ್ಟಿ, ಫಂಕ್ಷನ್ ಗಾಗಿ ಡ್ರೆಸ್ ಖರೀದಿಸಲು ಸಾವಿರಾರು ರೂಪಾಯಿ ಖರ್ಚು ಮಾಡೋದು ಅವಳಿಗೆ ಇಷ್ಟವಿಲ್ಲವಂತೆ. ಅಮೆರಿಕ ಮೂಲದ ಈ ಮಹಿಳೆ ಸದ್ಯ ಕೆನಡಾದಲ್ಲಿ ನೆಲೆಸಿದ್ದಾಳೆ. ಕಳೆದ ಹಲವು ವರ್ಷಗಳಿಂದ ಒಂದೇ ಡ್ರೆಸ್ ನಲ್ಲಿ ಅದೆಷ್ಟೋ ಮದುವೆ, ಪಾರ್ಟಿಗಳನ್ನು ಅಟೆಂಡ್ ಮಾಡಿದ್ದಾಳೆ.
ತನ್ನ ಬಳಿ ಇರೋದೆಲ್ಲ ಚಳಿಗಾಲಕ್ಕೆ ಸೂಕ್ತವಾದ ಬಟ್ಟೆಗಳು, ಬೇಸಿಗೆಯಲ್ಲಿ ಧರಿಸಲೆಂದೇ ವಿಶೇಷವಾಗಿ ತಾನು ಉಡುಪುಗಳನ್ನು ಖರೀದಿಸಿಲ್ಲ ಎನ್ನುತ್ತಾಳೆ ಈಕೆ. ಅವಳ ಬಳಿ ಒಂದು ಕಪ್ಪು, ಒಂದು ನೀಲಿ ಬಣ್ಣದ ಡ್ರೆಸ್ ಇದೆಯಂತೆ. ಜೊತೆಗೆ ಶಾರ್ಟ್ಸ್ ಧರಿಸ್ತಾಳೆ. ಕ್ಯಾಲಿಫೋರ್ನಿಯಾಕ್ಕೆ ಬಂದಾಗಲೆಲ್ಲ ಇದನ್ನೇ ಹಾಕಿಕೊಳ್ತಾಳೆ.
ಮದುವೆಗಳಿಗೂ ಇದನ್ನೇ ಧರಿಸಿ ಹೋಗ್ತಾಳಂತೆ. ಮೊದ ಮೊದಲು ಆಕೆಯ ಸ್ನೇಹಿತರೆಲ್ಲ ಆಡಿಕೊಂಡು ನಗುತ್ತಿದ್ದರಂತೆ. ಈಗ ಅವರಿಗೂ ಅಭ್ಯಾಸವಾಗಿ ಹೋಗಿದೆ. ಮದುವೆಗೆ ಆಕೆಗೆ ಆಹ್ವಾನಿಸಿದ್ದ ಸ್ನೇಹಿತೆರೊಬ್ಬರು ಅದೇ ಹಳೆಯ ನೀಲಿ ಡ್ರೆಸ್ ಧರಿಸಿ ಬರಬೇಡ ಎಂದು ಕಟ್ಟುನಿಟ್ಟಾಗಿ ಹೇಳಿದ್ದರಂತೆ. ತನ್ನ ಉಡುಪುಗಳನ್ನೂ ಜನರು ಇಷ್ಟು ಗಮನಿಸ್ತಾರೆ ಅನ್ನೋದು ಆಗ ಮಹಿಳೆಗೆ ಅರಿವಾಗಿದೆ. ಈ ಬಗ್ಗೆ ಆಕೆ ಸಾಮಾಜಿಕ ತಾಣಗಳಲ್ಲೂ ಬರೆದುಕೊಂಡಿದ್ದಾಳೆ.