ಬೆಂಗಳೂರು: ದಾವಣಗೆರೆ ಜಿಲ್ಲೆ ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಅಪರಿಚಿತನಿಂದ ಕೊಲೆಬೆದರಿಕೆ ಹಾಕಲಾಗಿದ್ದು, ಸದಾಶಿವನಗರ ಠಾಣೆಗೆ ರೇಣುಕಾಚಾರ್ಯ ದೂರು ನೀಡಿದ್ದಾರೆ. ಬೆಳಿಗ್ಗೆಯಿಂದ 11 ಸಲ ಫೋನ್ ಮಾಡಿ ಬೆದರಿಕೆ ಹಾಕಲಾಗಿದೆ. ಅಪರಿಚಿತ ಕರೆ ಎಂದು ರೇಣುಕಾಚಾರ್ಯ ಆರಂಭದಲ್ಲಿ ರಿಸೀವ್ ಮಾಡಿರಲಿಲ್ಲ. ಮತ್ತೆ ಮತ್ತೆ ಅದೇ ನಂಬರ್ ನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಏಕವಚನದಲ್ಲಿಯೇ ಬೈದಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ರೇಣುಕಾಚಾರ್ಯ ಪೊಲೀಸರಿಗೆ ದೂರು ನೀಡಿದ್ದಾರೆ.