alex Certify ಚರಂಡಿಗೆ ಬಿದ್ದು ಉಸಿರುಗಟ್ಟಿ ನಾಲ್ವರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರಂಡಿಗೆ ಬಿದ್ದು ಉಸಿರುಗಟ್ಟಿ ನಾಲ್ವರು ಸಾವು

ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಸಂಜೆ ನಡೆದ ಅವಘಡದಲ್ಲಿ ನಾಲ್ವರು ಉಸಿರುಗಟ್ಟಿ ಮೃತರಾಗಿದ್ದಾರೆ. ವಾಯುವ್ಯ ದೆಹಲಿಯ ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರದಲ್ಲಿನ ಚರಂಡಿಯಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಗ್ನಿಶಾಮಕ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಬುಧವಾರ ರಕ್ಷಣಾ ಕಾರ್ಯಾಚರಣೆ ನಡೆಸಿತು.

CRPF ಕ್ಯಾಂಪ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಮುಸುಕುಧಾರಿ ವ್ಯಕ್ತಿ

ಎಂಟಿಎನ್‌ಎಲ್ ಲೈನ್‌‌ಗಳಲ್ಲಿ ಕೆಲಸ ಮಾಡುತ್ತಿದ್ದ ಮೂವರು ಗುತ್ತಿಗೆ ಕಾರ್ಮಿಕರು ಚರಂಡಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಪ್ರಯತ್ನಿಸಿದ ಓರ್ವ ಆಟೋ ಚಾಲಕ‌ ಕೂಡ ಮೃತನಾಗಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಘಟನೆಯ ಬಗ್ಗೆ ಸಮಯಪುರ ಬದ್ಲಿ ಪೊಲೀಸ್ ಠಾಣೆಗೆ ಸಂಜೆ 6.30 ರ ಸುಮಾರಿಗೆ ಮಾಹಿತಿ ಬಂದಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಲಾಯಿತು.

ಬಚ್ಚು ಸಿಂಗ್, ಪಿಂಟು ಮತ್ತು ಸೂರಜ್ ಕುಮಾರ್ ಸಾಹ್ನಿ ಮೃತರಾದವರು. ರಿಕ್ಷಾ ಚಾಲಕನನ್ನು ರೋಹಿಣಿ ಸೆಕ್ಟರ್ -16 ರ ಸರ್ದಾರ್ ಕಾಲೋನಿ ನಿವಾಸಿ ಸತೀಶ್ (38) ಎಂದು ಗುರುತಿಸಲಾಗಿದೆ. ಒಳಚರಂಡಿಯೊಳಗೆ ಎಂಟಿಎನ್ಎಲ್ ಲೈನ್ ಕೆಳಗೆ ಐರನ್ ನೆಟ್ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...