ಮಂಡ್ಯ: ಮಂಡ್ಯ ಜಿಲ್ಲೆ ಪಾಲಹಳ್ಳಿ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಕುರಿಗಾಹಿ ಹಾಗೂ ಕುರಿಗಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ನಡೆದಿದೆ.
ರೈಲ್ವೆ ಹಳಿಗಳ ಬಳಿ ಕುರಿಗಳು ಮೇಯುತ್ತಿದ್ದವು, ರೈಲು ಬರುವ ಸದ್ದು ಕೇಳಿ ಗಾಬರಿಯಾದ ಕುರಿಗಳು ಹಳಿಗಳ ಮೇಲೆ ಹೋಗಿವೆ. ರೈಲು ಬರುವಷ್ಟರಲ್ಲಿ ಕುರಿಗಳನ್ನು ಓಡಿಸಬೇಕೆಂದು ಹೋದ ಕುರಿಗಾಹಿ ಕುರಿಗಳ ಸಮೇತ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾನೆ.
25 ರ ಯುವತಿಯನ್ನು ವಿವಾಹವಾಗಿ ಸುದ್ದಿಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣು
ಮೈಸೂರಿನಿಂದ ಬೆಂಗಳೂರಿನತ್ತ ಬರುತ್ತಿದ್ದ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.