ದೇಶ – ವಿದೇಶಗಳಲ್ಲಿ ಚಿನ್ನಾಭರಣ ಮಳಿಗೆ ಹೊಂದಿರುವ ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ ದಾಖಲೆ ಪತ್ರಗಳನ್ನು ಸಲ್ಲಿಸಿದೆ.
2,300 ಕೋಟಿ ರೂಪಾಯಿಗಳನ್ನು ಐಪಿಒ ಮೂಲಕ ಸಂಗ್ರಹಿಸಲು ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಉದ್ದೇಶಿಸಿದ್ದು, ಈ ಪೈಕಿ 1400 ಕೋಟಿ ರೂಪಾಯಿಗಳನ್ನು ಸಾಲ ಮರುಪಾವತಿಗೆ ಹಾಗೂ 463.90 ಕೋಟಿ ರೂಪಾಯಿಗಳನ್ನು ದೇಶದ ವಿವಿಧೆಡೆ ಮಳಿಗೆಗಳನ್ನು ತೆರೆಯಲು ಬಳಸಿಕೊಳ್ಳಲಿದೆ. ಇನ್ನುಳಿದ ಮೊತ್ತವನ್ನು ಕಾರ್ಪೊರೇಟ್ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಜೋಯಾಲುಕ್ಕಾಸ್ ಇಂಡಿಯಾ ಲಿಮಿಟೆಡ್ ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಟ್ಟು ಎಂಟು ಮಳಿಗೆಗಳನ್ನು ತೆರೆಯಲಿದೆ ಎಂದು ಹೇಳಲಾಗಿದೆ.