ಕೋವಿಡ್ ಕಾಲರ್ ಟ್ಯೂನ್ ಸ್ಥಗಿತಗೊಳ್ಳುವ ಸುದ್ದಿ ಬೆನ್ನಲ್ಲೇ ಇಂಟರ್ನೆಟ್ ನಲ್ಲಿ ಮೆಮೆಗಳ ಸುರಿಮಳೆ..! 29-03-2022 7:23AM IST / No Comments / Posted In: Latest News, India, Live News ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಿದಾಗಿನಿಂದ (2020ರಿಂದ), ಯಾರಿಗಾದ್ರೂ ಕರೆ ಮಾಡಬೇಕಾಗ್ರೆ ಫೋನ್ ರಿಂಗಾಗುವ ಬದಲು ಕೋವಿಡ್ ಕಾಲರ್ ಟ್ಯೂನ್ ಬರುತ್ತಿತ್ತು. ಇದರಿಂದ ಜನರು ರೋಸಿ ಹೋಗಿದ್ದರು. ಕೋವಿಡ್ -19 ಕುರಿತು ಮಾಹಿತಿಯಿಂದ ತುಂಬಿದ ವಿಸ್ತಾರವಾದ ಕಡ್ಡಾಯ ಕಾಲರ್ ಟ್ಯೂನ್ ಅನ್ನು ಕೇಳಲೇಬೇಕಾಗಿತ್ತು. ಫೋನ್ ಕರೆಗಳನ್ನು ಮಾಡುವಾಗ, ಕೆಮ್ಮುವ ಧ್ವನಿಯೊಂದಿಗೆ ಕಾಲರ್ ಟ್ಯೂನ್ ಪ್ರಾರಂಭವಾಗುತ್ತದೆ. ಮೊದಲಿಗೆ ಸಾಮಾಜಿಕ ಅಂತರ, ಮುಖಗವಸಿನ ಕಡ್ಡಾಯ ಧಾರಣೆ ಬಗ್ಗೆ ಮಾಹಿತಿ ನೀಡಲಾಗ್ತಿತ್ತು. ಜನವರಿ 2021 ರಿಂದ ಕಾಲರ್ ಟ್ಯೂನ್‌ನ ಸ್ವರೂಪವನ್ನು ಬದಲಾಯಿಸಲಾಯಿತು. ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾಲರ್ ಟ್ಯೂನ್ ಅನ್ನು ಸೇರಿಸಲಾಯಿತು. ಯಾರಿಗಾದ್ರೂ ತುರ್ತಾಗಿ ಕರೆ ಮಾಡಬೇಕಾದ ಈ ಕಾಲರ್ ಟ್ಯೂನ್ ಕೇಳಿ ಕೇಳಿ ಜನರು ಕೋಪದಿಂದ ರೋಸಿ ಹೋಗಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಕಾಲರ್ ಟ್ಯೂನ್ ಅನ್ನು ತೆಗೆದುಹಾಕಲು ನಿರ್ಧರಿಸಿದೆ. ಈ ಸುದ್ದಿ ನಿಮಗಾಗಲೇ ತಿಳಿದಿರಬಹುದು. ಇದೀಗ ಈ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಮೆಮೆಗಳ ಪ್ರವಾಹ ಹರಿದಿದೆ. ಬಾಲಿವುಡ್ ನ ಕೆಲವು ಸಿನಿಮಾಗಳ ದೃಶ್ಯಗಳನ್ನು ಎಡಿಟ್ ಮಾಡಿ ನೆಟ್ಟಿಗರು ಮೆಮೆ ಸೃಷ್ಟಿಸಿದ್ದಾರೆ. ಕಾಲರ್ ಟ್ಯೂನ್ ತೆಗೆದುಹಾಕಲು ಕೇಂದ್ರ ನಿರ್ಧರಿಸಿದ್ದಕ್ಕೆ, ಸಿನಿಮಾದಲ್ಲಿ ಕಲಾವಿದರು ಆನಂದಭಾಷ್ಪ ಸುರಿಸುತ್ತಿರುವ ಫೋಟೋವನ್ನು ಎಡಿಟ್ ಮಾಡಿ ಹಾಕಲಾಗಿದೆ. ಅಬ್ಬಾ ಕೊನೆಗೂ ಇದರಿಂದ ಮುಕ್ತಿ ಸಿಕ್ತಲ್ಲಪ್ಪಾ, ಅಬ್ಬಾ ದೇವರು ದೊಡ್ಡವನು ಎಂಬೆಲ್ಲಾ ರೀತಿಯಲ್ಲಿ ಮೆಮೆಗಳನ್ನು ಸೃಷ್ಟಿಸಲಾಗಿದೆ. https://twitter.com/msdian__fan/status/1508372897416429571?ref_src=twsrc%5Etfw%7Ctwcamp%5Etweetembed%7Ctwterm%5E1508372897416429571%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwith-covid-no-more-a-mahamari-caller-tune-may-go-soon-internet-rejoices-with-memes-1930593-2022-03-28 😁 pic.twitter.com/vUDJBQo0iK — Piyu 👩⚕️ 🇮🇳 (Nutrition Parivar) 🍒🍇 (@PiyuNair) March 28, 2022 Utho Anarkali, covid ki caller tune bajni band ho gyi hai. pic.twitter.com/uh6gfhYkEQ — Chai aur Biskit (@ChaiaurBiskit) March 28, 2022 Finally: pic.twitter.com/PSd7HIDm26 — Vikrant Chawla (@VikrantChawla_) March 28, 2022 https://twitter.com/Dastaan1234567/status/1508366135951241220?ref_src=twsrc%5Etfw%7Ctwcamp%5Etweetembed%7Ctwterm%5E1508366135951241220%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwith-covid-no-more-a-mahamari-caller-tune-may-go-soon-internet-rejoices-with-memes-1930593-2022-03-28