
ದೆಹಲಿಯಲ್ಲಿ ಶತಮಾನದಷ್ಟು ಹಳೆಯದಾದ ಆಲದ ಮರ ತನ್ನ ಕೇರ್ ಟೇಕರ್ ಗಾಗಿ ಕಾಯುತ್ತಲೇ ಇದೆ. ಆದ್ರೆ ಈವರೆಗೂ ಮರದ ರಕ್ಷಣೆಯ ಹೊಣೆ ಯಾರದ್ದೂ ಹೆಗಲೇರಿಲ್ಲ. ಅರಣ್ಯ ಇಲಾಖೆಯು ವರ್ಷದ ಹಿಂದೆ ಈ ಮರವನ್ನು ದತ್ತು ಪಡೆಯಲು ಅರ್ಜಿ ತೆಗೆದುಕೊಂಡಿತ್ತು. ಆದ್ರೆ ವಿಷಯ ಇನ್ನೂ ಇತ್ಯರ್ಥವಾಗಿಲ್ಲ.
ಮರದ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು, ದೆಹಲಿ ಟ್ರೀ ಅಥಾರಿಟಿಯ ಮುಂದಿನ ಸಭೆಯಲ್ಲಿ ನಿಗದಿಪಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ವಾಸ್ತವವಾಗಿ ಇಲಾಖೆಗೆ 40 ಅರ್ಜಿಗಳು ಬಂದಿದ್ದವು. ಆದರೆ ಯಾವುದೂ ಇತ್ಯರ್ಥವಾಗಿಲ್ಲ. ಈ ಆಲದ ಮರವನ್ನು ಉಳಿಸಲು ಸ್ಥಳೀಯರು, ಸಾಮಾಜಿಕ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಹಾಯ ಮಾಡುವಂತೆ ಅರಣ್ಯ ಇಲಾಖೆಯು ಕಳೆದ ವರ್ಷ ಜನವರಿಯಲ್ಲಿ ದೆಹಲಿ ಟ್ರೀ ಪ್ರೊಟೆಕ್ಷನ್ ಆಕ್ಟ್ (ಡಿಪಿಟಿಎ) ಸೆಕ್ಷನ್ 13 ರ ಅಡಿಯಲ್ಲಿ ನೋಟಿಸ್ ನೀಡಿತ್ತು.
ಮರದ ರಕ್ಷಣೆಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಗೆ ಅರ್ಜಿ ಹಾಕಲಾಗಿತ್ತು. ಈ ಮರ ಸುಮಾರು 300 ವರ್ಷ ಹಳೆಯದಿರಬಹುದೆಂದು ಕೋರ್ಟ್ ಅಂದಾಜಿಸಿದೆ. ಆದ್ರೆ ಟ್ರೀ ಅಥಾರಿಟಿ ಪ್ರಕಾರ ಈ ಮರಕ್ಕೆ ಕೇವಲ 150 ವರ್ಷ ಪ್ರಾಯವಂತೆ. ಈಗಾಗ್ಲೇ ಮರಕ್ಕೆ ಸಾಕಷ್ಟು ಹಾನಿಯಾಗಿರುವುದರಿಂದ ರಕ್ಷಣೆ ಕಷ್ಟವೆಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಆದ್ರೆ ಮರದ ರಕ್ಷಣೆ ಮಾಡಿಯೇ ಸಿದ್ಧ ಅಂತಾ ಟ್ರೀ ಅಥಾರಿಟಿ ಹೇಳ್ತಾ ಇದೆ. ಯಾರು ಮರವನ್ನು ದತ್ತು ತೆಗೆದುಕೊಳ್ತಾರೋ ಅವರಿಗೇ ಮರದ ಜವಾಬ್ಧಾರಿ ವಹಿಸಲು ಪ್ರಾಧಿಕಾರ ಮುಂದಾಗಿದೆ.