ನವದೆಹಲಿ: ಹಿರಿಯ ನಾಗರಿಕರವಯ ವಂದನ ಪಿಂಚಣಿ ಯೋಜನೆಯನ್ನು ಏಪ್ರಿಲ್ 1 ರಂದು ಪರಿಷ್ಕರಣೆ ಮಾಡಲಾಗುವುದು.
2020 ರಲ್ಲಿ ವಯ ವಂದನ ಯೋಜನೆ ಜಾರಿಯಾಗಿದ್ದು, 60 ವರ್ಷ ಮೇಲ್ಪಟ್ಟ ಹಿರಿಯರು ಹೂಡಿಕೆ ಮಾಡಬಹುದು. ಯೋಜನೆಯಡಿ ಹೂಡಿಕೆಗೆ ಗರಿಷ್ಠ ವಯೋಮಿತಿ ಇರುವುದಿಲ್ಲ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ನೀಡುವ ಬಡ್ಡಿಗೆ ಸಮಾನವಾಗಿ ಪ್ರಧಾನಮಂತ್ರಿ ವಯ ವಂದನ ಪಿಂಚಣಿ ಯೋಜನೆಯಲ್ಲಿಯೂ ಬಡ್ಡಿದರ ಸಿಗುತ್ತದೆ. ಪ್ರಸ್ತುತ ಇದರ ಬಡ್ಡಿ ಶೇಕಡ 7.40 ರಷ್ಟು ಇದೆ. 2020 -21 ರ ಬಡ್ಡಿ ದರ ಪರಿಷ್ಕರಣೆ ಆಗಿಲ್ಲ. ಏಪ್ರಿಲ್ 1 ರಂದು ಬಡ್ಡಿ ದರ ಪರಿಷ್ಕರಣೆ ಆಗಲಿದ್ದು, ಹೂಡಿಕೆಗೆ 2023ರ ಮಾರ್ಚ್ 31 ಕೊನೆಯ ದಿನವಾಗಿರುತ್ತದೆ ಎಂದು ಹೇಳಲಾಗಿದೆ.
ಯೋಜನೆಯ ಅವಧಿ 10 ವರ್ಷವಾಗಿದ್ದು, ಯೋಜನೆಯ ಕೊನೆಯಲ್ಲಿ ಹೂಡಿಕೆಯ ಹಣ ವಾಪಸ್ ನೀಡಲಾಗುವುದು. ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದಾಗಿದ್ದು, ಹೂಡಿಕೆ ಆಯ್ಕೆ ಆಧರಿಸಿ ಪಿಂಚಣಿ ಮೊತ್ತ ನಿರ್ಧಾರವಾಗಲಿದೆ. ಮಾಸಿಕ 1 ಸಾವಿರ ರೂಪಾಯಿ ಮತ್ತು ಗರಿಷ್ಠ 9,250 ರೂ. ಪಿಂಚಣಿ ನೀಡಲಾಗುವುದು.