ವ್ಯಕ್ತಿಯೊಬ್ಬರ ಮೇಲೆ ಕತ್ತಿ ಮೀನು ದಾಳಿ ಮಾಡಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ಕತ್ತಿಮೀನು ವ್ಯಕ್ತಿಯ ಮೇಲೆ ದಾಳಿ ಮಾಡಿದ ಭಯಾನಕ ಕ್ಷಣವು ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಳ ಸಮುದ್ರದ ಈಜುಗಾರನ ಮೇಲೆ ಕತ್ತಿ ಮೀನು ಅಪ್ರಚೋದಿತ ದಾಳಿ ಮಾಡಿದ ಭಯಾನಕ ಘಟನೆ ಬ್ರೆಜಿಲ್ನ ಕರಾವಳಿಯಲ್ಲಿ ಸಂಭವಿಸಿದೆ. ಮೀನು ದಾಳಿ ಮಾಡುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ಐದು ಅಡಿ ಉದ್ದದ ಕತ್ತಿಮೀನು ಈಜುಗಾರನ ಮೇಲೆ ದಾಳಿ ಮಾಡಿದೆ. ಈಜುಗಾರ ಧರಿಸಿದ್ದ ಆಮ್ಲಜನಕಕ್ಕೆ ಮೀನು ಬಡಿದಿದೆ. ನಂತರ ಸ್ಕೂಬಾ ಗೇರ್ನಲ್ಲಿ ಸಿಕ್ಕಿಹಾಕಿಕೊಂಡ ಮೀನು ತನ್ನನ್ನು ಬಿಡಿಸಿಕೊಳ್ಳಲು ಹುಚ್ಚುಚ್ಚಾಗಿ ಬಡಿಯುತ್ತದೆ. 721 ಅಡಿ ಕೆಳಗೆ ಸಮುದ್ರದ ತಳದಲ್ಲಿ ನಡೆದ ಅಸ್ಥಿರವಾದ ದೃಶ್ಯಾವಳಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಮೀನು ಆತನಿಗೆ ಬಡಿಯುತ್ತಿದ್ದಂತೆ, ಈಜುಗಾರನು ಹಗ್ಗವನ್ನು ಬಳಸಿ ಡೈವಿಂಗ್ ಬೆಲ್ಗೆ ಏರಲು ಯಶಸ್ವಿಯಾಗಿದ್ದಾನೆ. ಈ ಭಯಾನಕ ಘಟನೆಯು ಏಪ್ರಿಲ್ 2016ರಲ್ಲಿ ಸಂಭವಿಸಿದ್ದು, ಹಳೆ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ನೀರೊಳಗಿಟ್ಟಿದ್ದ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಕತ್ತಿಮೀನು ಸಮುದ್ರದಲ್ಲಿನ ಅತ್ಯಂತ ವೇಗದ ಮತ್ತು ಶಕ್ತಿಯುತ ಮೀನುಗಳಲ್ಲಿ ಒಂದಾಗಿದೆ. ಕತ್ತಿಮೀನುಗಳು ತಮ್ಮ ಉದ್ದನೆಯ ಕತ್ತಿಯಂತಿರುವ ಬಾಯಿಯನ್ನು ಹೊಂದಿರುತ್ತದೆ. ನೋಡಲು ಈಟಿಯಂತೆ ಕಂಡರೂ ಈ ಮೀನುಗಳು ಅದನ್ನು ಚುಚ್ಚಲು ಬಳಸುವುದಿಲ್ಲ ಎಂದು ಹೇಳಲಾಗಿದೆ. ತಿಮಿಂಗಿಲಗಳು, ಶಾರ್ಕ್ಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಇದು ತನ್ನ ಕತ್ತಿಯಂತಿರುವ ಆಯುಧವನ್ನು ಬಳಸುತ್ತದೆ. ಆದರೆ, ಇವು ಹೆಚ್ಚಾಗಿ ಸಣ್ಣ-ಸಣ್ಣ ಜೀವಿಗಳನ್ನಷ್ಟೇ ಬೇಟೆಯಾಡುತ್ತವೆ. ಇದುವರೆಗೂ ಕತ್ತಿಮೀನುಗಳು ಜನರನ್ನು ಗಾಯಗೊಳಿಸಿದ ಅಥವಾ ಕೊಂದ ವರದಿಗಳು ಕೇಳಿಬಂದಿಲ್ಲ.
https://twitter.com/AvatarDomy2/status/1502007342363205636?ref_src=twsrc%5Etfw%7Ctwcamp%5Etweetembed%7Ctwterm%5E1502007342363205636%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fviral%2Fviral-video-the-terrifying-moment-a-deep-sea-diver-was-attacked-by-a-swordfish-article-90436752