ಭಾರತದಲ್ಲಿ ಪ್ರತಿಯೊಬ್ಬ ನಾಗರಿಕರು ಹೊಂದಲೇಬೇಕಾದ ಅತ್ಯಂತ ಮಹತ್ವದ ದಾಖಲೆಗಳಲ್ಲೊಂದು ಆಧಾರ್ ಕಾರ್ಡ್. UIDAI ನಿಂದ ಕೊಡಲ್ಪಡುತ್ತಿರೋ 12 ಅಂಕಿಯ ಆಧಾರ್, ಪ್ರತಿಯೊಬ್ಬ ಭಾರತೀಯರ ಗುರುತಿನ ಅತ್ಯಗತ್ಯ ಭಾಗವಾಗಿದೆ. ವಿಳಾಸ ಪುರಾವೆ, ಜನ್ಮ ದಿನಾಂಕದ ಪುರಾವೆ ಸೇರಿದಂತೆ ಹಲವು ದಾಖಲೆಗಳು ಇದರಲ್ಲಿವೆ.
ಆಧಾರ್ ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿದ್ದರೆ ಕೆಲವೊಂದು ಸೇವೆಗಳನ್ನು ಪಡೆಯಲು ಆಯ್ದ ಸರ್ಕಾರಿ ವೆಬ್ ಪೋರ್ಟಲ್ಗಳಲ್ಲಿ ಲಾಗ್ ಇನ್ ಮಾಡಲು ಬಳಕೆದಾರರಿಗೆ ಅವಕಾಶ ದೊರೆಯುತ್ತದೆ. ಆದ್ದರಿಂದ ನಿಮ್ಮ ಇತ್ತೀಚಿನ ಮೊಬೈಲ್ ಫೋನ್ ಸಂಖ್ಯೆಯನ್ನು ಆಧಾರ್ನಲ್ಲಿ ನವೀಕರಿಸಿ.
1.ಇದಕ್ಕಾಗಿ ಮೊದಲು ask.uidai.gov.in ವಿಸಿಟ್ ಮಾಡಿ.
2. ನೀವು ನವೀಕರಿಸಲು ಬಯಸುವ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಂಬಂಧಿತ ಬಾಕ್ಸ್ಗಳಲ್ಲಿ ಕ್ಯಾಪ್ಚಾದಲ್ಲಿ ಟೈಪ್ ಮಾಡಿ.
3. ‘ಸೆಂಡ್ OTP’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನ್ ಸಂಖ್ಯೆಗೆ ಕಳುಹಿಸಲಾದ OTPಯನ್ನು ನಮೂದಿಸಿ. ನಂತರ ‘ಸಬ್ಮಿಟ್ ಒಟಿಪಿ ಮತ್ತು ಪ್ರೊಸೀಡ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಇದಾದ ಬಳಿಕ ನಿಮ್ಮ ಹೆಸರು, ವಿಳಾಸ, ಲಿಂಗ, ಇಮೇಲ್-ID, ಮೊಬೈಲ್ ಸಂಖ್ಯೆ ಹೀಗೆ ವಿವಿಧ ಆಯ್ಕೆಗಳಿರುವ ‘ಆನ್ಲೈನ್ ಆಧಾರ್ ಸೇವೆಗಳು’ ಎಂಬ ಡ್ರಾಪ್ಡೌನ್ ಮೆನು ಇದೆ. ಅದರಲ್ಲಿ ನೀವು ನವೀಕರಿಸಲು ಬಯಸುವ ಒಂದನ್ನು ಕ್ಲಿಕ್ ಮಾಡಿ. ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕಾದಲ್ಲಿ ಆ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ಅದಕ್ಕೆ ಅನುಗುಣವಾಗಿ ಭರ್ತಿ ಮಾಡಬೇಕಾದ ವಿವರಗಳನ್ನು ತುಂಬಿಸಿ.
5. ಮೊಬೈಲ್ ಸಂಖ್ಯೆಯನ್ನು ಸಲ್ಲಿಸಿದ ನಂತರ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ಕ್ಯಾಪ್ಚಾವನ್ನು ನಮೂದಿಸಬೇಕು. ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಪರಿಶೀಲಿಸಿ, ಸೇವ್ & ಕಂಟಿನ್ಯೂ ಆಪ್ಷನ್ ಕ್ಲಿಕ್ ಮಾಡಿ.
6. ನಾಮಿನಲ್ ಫೀಸ್ ಕಟ್ಟಲು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಲು ಆನ್ಲೈನ್ನಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡಿ. ನಿಮಗೆ ಹೆಚ್ಚುವರಿ ಮಾಹಿತಿಯೇನಾದರೂ ಬೇಕಿದ್ದಲ್ಲಿ ಅದನ್ನೂ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಪರ್ಮನೆಂಟ್ ಎನ್ ರೋಲ್ಮೆಂಟ್ ಸೆಂಟರ್ ಗೆ ಭೇಟಿ ನೀಡಬೇಕು.