ಅಮೆರಿಕಾದ ನ್ಯೂ ಓರ್ಲಿಯನ್ಸ್‌ಗೆ ಅಪ್ಪಳಿಸಿದ ಭೀಕರ ಸುಂಟರಗಾಳಿಯ ಕೆಲವು ಆಘಾತಕಾರಿ ದೃಶ್ಯಗಳು ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿದೆ.
ಇಲ್ಲಿನ ಸ್ಥಳೀಯ ನಿವಾಸಿಗಳು ಹಂಚಿಕೊಂಡ ವಿಡಿಯೋದಲ್ಲಿ, ಭಯಾನಕ ಕಪ್ಪು ಬಣ್ಣದ ಕೊಳವೆಯ ಆಕಾರದ ಸುಂಟರಗಾಳಿಯು ಜನರ ಮನೆಗಳ ಕಡೆಗೆ ಮುನ್ನುಗ್ಗುತ್ತಿರುವುದನ್ನು ತೋರಿಸುತ್ತದೆ. ಕಣ್ಣಿಗೆ ಕಾಣುವಷ್ಟು ಎಲ್ಲವನ್ನೂ ಧ್ವಂಸಗೊಳಿಸುತ್ತಿದ್ದು, ಭಯಾನಕವಾಗಿದೆ.
ವರದಿ ಪ್ರಕಾರ, ಡಾರ್ಕ್ ಫನಲ್ ಮೋಡವು ನಗರವನ್ನು ಸ್ಪರ್ಶಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ಚಿತ್ರಗಳು, ವಿಡಿಯೋಗಳನ್ನು ತೋರಿಸಿವೆ. ಅರಾಬಿ, ಗ್ರೆಟ್ನಾ ಮತ್ತು ಸೇಂಟ್ ಬರ್ನಾರ್ಡ್ ಪ್ಯಾರಿಷ್‌ನ ಪ್ರದೇಶಗಳಲ್ಲಿ ಹಾನಿಯಾಗಿರೋ ಬಗ್ಗೆ ವರದಿಯಾಗಿದೆ.
ಭಯಾನಕ ಪ್ರಕೃತಿ ವಿಕೋಪವನ್ನು ನೋಡಿ ಜನರು ಏದುಸಿರು ಬಿಡುತ್ತಾ, ಅಳುವುದನ್ನು ವಿಡಿಯೋದಲ್ಲಿ ನೋಡಬಹುದು. ಇದರ ಪರಿಣಾಮವಾಗಿ, ನ್ಯೂ ಓರ್ಲಿಯನ್ಸ್‌ನಲ್ಲಿ ಸುಮಾರು 8,000 ಗ್ರಾಹಕರು ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ವಾಸಿಸುವಂತಾಯ್ತು. ನ್ಯೂ ಓರ್ಲಿಯನ್ಸ್‌ನ ಹಲವಾರು ಪ್ರದೇಶಗಳಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂಬ ಬಗ್ಗೆ ವರದಿಯಾಗಿದೆ.
https://twitter.com/cemeteryfairyyy/status/1506438877627797510?ref_src=twsrc%5Etfw%7Ctwcamp%5Etweetembed%7Ctwterm%5E1506438877627797510%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fvideos-of-black-funnel-cloud-in-tornado-hit-new-orleans-go-viral-online-watch-1929570-2022-03-25