ರಾಜಸ್ಥಾನದ ಭರತ್ ಪುರದ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವ್ಯಕ್ತಿಯೋರ್ವ ಕೊಲೆಯಾದ ಎರಡು ದಿನಗಳ ನಂತರ, ತನ್ನ ಅಪರಾಧವನ್ನು ಒಪ್ಪಿಕೊಂಡ ಆತನ ಹೆಂಡತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮೃತನನ್ನು ಜಿತೇಂದ್ರ(30) ಎಂದು ಗುರುತಿಸಲಾಗಿದೆ. ಮದ್ಯವ್ಯಸನಿಯಾಗಿದ್ದ ಜಿತೇಂದ್ರ ಪತ್ನಿ ದೀಪಾ(28) ಜೊತೆಗೆ ವಾಸಿಸುತ್ತಿದ್ದ. ಆತನ ಕುಡಿತದ ಚಟ ಮತ್ತು ದೈನಂದಿನ ಹಲ್ಲೆಗಳಿಂದ ಮನನೊಂದ ಮಹಿಳೆ ಮಂಗಳವಾರ ಆತನಿಗೆ ನಿದ್ರಾಜನಕ ಬೆರೆಸಿದ ಪಾನೀಯವನ್ನು ನೀಡಿದ್ದಾಳೆ. ಅವನು ಪ್ರಜ್ಞೆ ತಪ್ಪಿದ ನಂತರ, ಅವನ ಕತ್ತು ಸೀಳಿ ಹತ್ಯೆ ಮಾಡಿದ್ದಾಳೆ.
ಶವ ಪತ್ತೆಯಾದಾಗಿನಿಂದ ದೀಪಾ ಅನುಮಾನಾಸ್ಪದ ವರ್ತನೆ ತೋರಿದ್ದಳು. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಕೆ ತನ್ನ ಅಪರಾಧ ಒಪ್ಪಿಕೊಂಡಿದ್ದಾಳೆ. ಪತಿ ಮದ್ಯ ಸೇವಿಸಿ ಹೊಡೆಯುತ್ತಿದ್ದ. ಇದನ್ನು ತಾಳದೇ ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.