ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಅವರನ್ನು ವಿವಾಹವಾದ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಇಂದಿಗೂ ಬಹು ಬೇಡಿಕೆಯ ನಟಿಯಾಗಿದ್ದಾರೆ.
ಇದೀಗ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ನಡೆದ ಆಸ್ಕರ್‌ಗೆ ಮುಂಚಿನ ಈವೆಂಟ್‌ನಲ್ಲಿ ಭಾಗವಹಿಸಿದ ಚೋಪ್ರಾ, ಕಪ್ಪು ಬಣ್ಣದ ಸೀರೆಯನ್ನು ಧರಿಸಿ ಮಿಂಚಿದ್ದಾರೆ. ಈ ಮೂಲಕ ಅವರು ನಿಜವಾಗಿಯೂ ದೇಸಿ ಗರ್ಲ್ ಅನ್ನೋದನ್ನು ಸಾಬೀತುಪಡಿಸಿದ್ದಾರೆ.
ಚಲನಚಿತ್ರಗಳಲ್ಲಿ ದಕ್ಷಿಣ ಏಷ್ಯಾದ ಶ್ರೇಷ್ಠತೆಯನ್ನು ಆಚರಿಸಲು ನಡೆದ ಕಾರ್ಯಕ್ರಮಕ್ಕೆ ಅವರು ನಿರೂಪಕರಾಗಿದ್ದರು. ಪ್ರಿಯಾಂಕಾ ಅವರ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
ಪ್ರಿಯಾಂಕಾ ಚೋಪ್ರಾ ಎಂಕೆ ಜೇಡ್ ಲೇಬಲ್‌ನ ಮೊನೊಟೋನ್ ಸೀರೆಯನ್ನು ಧರಿಸಿದ್ದರು. ಗ್ಲಾಮ್ ಸ್ಟ್ರಾಪ್‌ಲೆಸ್ ಬ್ಲೌಸ್‌ನೊಂದಿಗೆ ಸಾಂಪ್ರದಾಯಿಕ ಸೀರೆಯನ್ನು ಧರಿಸಿದ್ದ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ಭಾಷಣ ಮಾಡುತ್ತಾ ಅಮೆರಿಕಾದಲ್ಲಿ ಕೆಲಸ ಹುಡುಕುತ್ತಿದ್ದ ಸಮಯದ ಬಗ್ಗೆ ಮಾತನಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ತನ್ನ ಮೊದಲ ಮಗುವನ್ನು ಪತಿ ನಿಕ್ ಜೋನಾಸ್ ಅವರೊಂದಿಗೆ ಸ್ವಾಗತಿಸಿದ್ದಾರೆ. ಸಿಟಾಡೆಲ್, ಟೆಕ್ಸ್ಟ್ ಫಾರ್ ಯೂ ಮತ್ತು ಎಂಡಿಂಗ್ ಥಿಂಗ್ಸ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.