ಬುಧವಾರ ಬೆಳಗ್ಗೆ ಹೈದರಾಬಾದ್ನ ಭೋಯಿಗುಡಾ ಪ್ರದೇಶದಲ್ಲಿ ಗೋದಾಮಿಗೆ ಹೊತ್ತಿಕೊಂಡ ಬೆಂಕಿಯಿಂದಾಗಿ 11 ಮಂದಿ ಸಜೀವ ದಹನವಾಗಿದ್ದರು. ಇದೀಗ ಈ ದುರ್ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು ಎದೆ ಝಲ್ ಎನಿಸುವಂತಿದೆ.
ಈ ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಪ್ರೇಮ್ ಕುಮಾರ್, ಕಿಟಕಿಯ ಗ್ರಿಲ್ಗಳನ್ನು ಮುರಿದು ಗೋದಾಮಿನಿಂದ ಹೊರಬಂದಿದ್ದಾರೆ. ಈ ವ್ಯಕ್ತಿಯು ಗೋದಾಮಿನಿಂದ ಹೊರಬರುತ್ತಿದ್ದಂತೆಯೇ ವೇರ್ ಹೌಸ್ ಸ್ಫೋಟಗೊಂಡಿದೆ.
ಹೈದರಾಬಾದ್ ಪೊಲೀಸರು ವೇರ್ ಹೌಸ್ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಸ್ತುತ ಮಾಲೀಕ ತಲೆಮರೆಸಿಕೊಂಡಿದ್ದು ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.