ಬೆಂಗಳೂರು ನಗರದಲ್ಲಿ ಸಾಧನೆ ಮಾಡಿದ ಮಹಿಳೆಯರು ಅಪರೂಪ ಮತ್ತು ಬಹಳ ವಿಶೇಷವಾದವರು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ. ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ನಿಮ್ಮೆಲ್ಲರ ಸಾಧನೆ ವಿಶ್ವಕ್ಕೆಲ್ಲ ಮಾದರಿಯಾದದ್ದು. ನಿಮ್ಮೆಲ್ಲರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಅತ್ಯಂತ ಶ್ಲಾಘನೀಯ ಎಂದರು.
ಬಿ ಪ್ಯಾಕ್, ಬಿ ಕ್ಲಿಪ್ ಹಳೆ ವಿದ್ಯಾರ್ಥಿ ಸಂಘ ಮತ್ತು ಶ್ರೀ ಕೃಷ್ಣ ವೆಲ್ ನೆಸ್ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರದ ವತಿಯಿಂದ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ 100 ಮಹಿಳಾ ಸಾಧಕಿಯರಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿ ಕಿರಣ್, ಹೇಗೆ ಪ್ರತಿ ಪುರುಷನ ಸಾಧನೆ ಹಿಂದೆ ಮಹಿಳೆ ಇರುತ್ತಾಳೋ ಅದೇ ರೀತಿ ಮಹಿಳೆಯ ಸಾಧನೆ ಹಿಂದೆ ಪುರುಷನ ಬೆಂಬಲ ಇರುತ್ತದೆ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹೆಜ್ಜೆ ಹಾಕಬೇಕು ಎಂದರು. ಪುರುಷ ಮತ್ತು ಮಹಿಳೆ ನಡುವೆ ಸ್ಪರ್ಧೆ ಇರಬಾರದು ಸಹಕಾರ ಇರಬೇಕು. ಹಾಗಾದ್ರೆ ಮಾತ್ರ ಉತ್ತಮ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಓದುವ ಹದಿಹರೆಯದ ಯುವತಿಯರಿಗೆ ಅವರ ಗುರಿಯ ಬಗ್ಗೆ ನಿಖರತೆ ಮೂಡಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಬೇಕು. ಅವರ ಆಸಕ್ತಿಗೆ ಪ್ರೋತ್ಸಾಹ ನೀಡಬೇಕೆಂದು ರಶ್ಮಿ ರವಿ ಕಿರಣ್ ಹೇಳಿದ್ರು.
ಬೆಂಗಳೂರು ಮಹಿಳಾ ಸಾಧಕಿಯರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿಕಿರಣ್, ಶಾಸಕ ರಿಜ್ವಾನ್ ಆರ್ಶದ್, ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ಸಂತೋಷ್ ಲಾಡ್, ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಬಿ ಪ್ಯಾಕ್ ನ ಆನಂದ್ ಬೇಗೂರು ಮೊದಲಾದವರು ಉಪಸ್ಥಿತಿರಿದ್ದರು.