
ಪ್ರತಿದಿನ ಒಂದಲ್ಲ ಒಂದು ಹೊಸ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಇದೀಗ Samsung ಭಾರತದಲ್ಲಿ ತನ್ನ Galaxy S22 ಅಲ್ಟ್ರಾ ಸ್ಮಾರ್ಟ್‌ಫೋನ್‌ನ 1TB ಸ್ಟೋರೇಜ್ ಹೊಂದಿರುವ ಮೊಬೈಲ್ ಅನ್ನು ಪರಿಚಯಿಸಿದೆ. ಇದೇ ಸ್ಮಾರ್ಟ್‌ಫೋನ್ ಇದಕ್ಕೂ ಮೊದಲು 256 GB ಮತ್ತು 512 GB ಸ್ಟೋರೇಜ್‌ನಲ್ಲಿ ಮಾತ್ರ ಲಭ್ಯವಿತ್ತು. ಗ್ರಾಹಕರು ಮಾರ್ಚ್ 28ರಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದು.
Samsung Galaxy S22 Ultra 1TB ಫೋನ್ ನ ಬೆಲೆ 1,34,999 ರೂಪಾಯಿ. ಲೈವ್ ಸೇಲ್ ಈವೆಂಟ್ ಮಾರ್ಚ್ 28ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಈ ಫೋನ್ ಕೊಳ್ಳುವವರಿಗೆ 23,999 ರೂಪಾಯಿ ಮೌಲ್ಯದ ಗ್ಯಾಲಕ್ಸಿ ವಾಚ್ 4, ಕೇವಲ 2,999 ರೂಪಾಯಿಗೆ ದೊರೆಯಲಿದೆ. Samsung Galaxy S22 Ultra ಸ್ಮಾರ್ಟ್‌ಫೋನ್ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಹೊಂದಿದೆ.
ಇದರಲ್ಲಿ ‘ವಿಷನ್ ಬೂಸ್ಟರ್ ಟೆಕ್ನಾಲಜಿ’ ಅಳವಡಿಸಲಾಗಿದೆ. ಆಟೋಮ್ಯಾಟಿಕ್ ಸ್ಕ್ರೀನ್ ಬ್ರೈಟ್ ನೆಸ್ ಆಪ್ಷನ್ ಇದರಲ್ಲಿದೆ. Qualcommನ ಇತ್ತೀಚಿನ 4nm Snapdragon 8 Gen 1 ಚಿಪ್‌ಸೆಟ್ ಮತ್ತು 12GB RAM ಈ ಫೋನ್‌ನಲ್ಲಿ ಲಭ್ಯವಿದೆ. ಹಿಂಭಾಗದಲ್ಲಿ ಇದು 108 ಮೆಗಾಪಿಕ್ಸೆಲ್ ಕ್ವಾಡ್ ರೇರ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 40 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಅಳವಡಿಸಲಾಗಿದೆ. ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ.