alex Certify BIG BREAKING: ಮಧ್ಯರಾತ್ರಿಯೇ ರಾರಾಜಿಸಿದ ‘RRR’ ರಿಲೀಸ್, ಭರ್ಜರಿ ಓಪನಿಂಗ್ -ಮುಗಿಲುಮುಟ್ಟಿದ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮಧ್ಯರಾತ್ರಿಯೇ ರಾರಾಜಿಸಿದ ‘RRR’ ರಿಲೀಸ್, ಭರ್ಜರಿ ಓಪನಿಂಗ್ -ಮುಗಿಲುಮುಟ್ಟಿದ ಸಂಭ್ರಮ

ಬೆಂಗಳೂರು: ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ, ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘RRR’ ಮಧ್ಯರಾತ್ರಿಯೇ ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ,

ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 9 ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ‘RRR’ ಪ್ರೀಮಿಯರ್ ಶೋ ನಡೆದಿದ್ದು, ಅಭಿಮಾನಿಗಳ ಸಂಭ್ರಮ ಹೇಳತೀರದಾಗಿದೆ.

ಮಧ್ಯರಾತ್ರಿ 12:15 ಕ್ಕೆ ಮೊದಲ ಶೋ ಆರಂಭವಾಗಿದ್ದು, ಹೌಸ್ ಫುಲ್ ಪ್ರದರ್ಶನ ಕಂಡಿದೆ. ಚಿಕ್ಕಬಳ್ಳಾಪುರದಿಂದ ಮಹಿಳೆಯೊಬ್ಬರು ಎರಡೂವರೆ ತಿಂಗಳ ಮಗುವಿನೊಂದಿಗೆ ಆಗಮಿಸಿ ಬೆಂಗಳೂರಿನ ಶಂಕರ್ ನಾಗ್ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.

ಇದು ನೆಕ್ಸ್ಟ್ ಲೆವೆಲ್ ಮೂವಿ ಎಂದು ಅಭಿಮಾನಿಗಳು ಹೇಳಿದ್ದಾರೆ. ಅಭಿಮಾನಿಗಳ ಸಂಭ್ರಮವಂತೂ ಮುಗಿಲುಮುಟ್ಟಿದೆ.

ಬಹುನಿರೀಕ್ಷಿತ ‘RRR’ ಸಿನಿಮಾ ರಾಜ್ಯದ 450 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. 170ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಗಳು, ಮಲ್ಟಿಪ್ಲೆಕ್ಸ್ ಸೇರಿ 450 ಥಿಯೇಟರ್ ಗಳಲ್ಲಿ ಬಿಡುಗಡೆಯಾಗ್ತಿದೆ. ಮಧ್ಯರಾತ್ರಿಯಿಂದಲೇ ಪ್ರದರ್ಶನ ಶುರುವಾಗಿದ್ದು, ಟಿಕೆಟ್ ಸೋಲ್ಡ್ ಔಟ್ ಆಗಿವೆ. ನಾಳಿನ ಟಿಕೆಟ್ ಕೂಡ ಸೇಲ್ ಆಗಿದ್ದು, ‘RRR’ ಗೆ ಅದ್ದೂರಿ ಸ್ವಾಗತ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...