ನವದೆಹಲಿ: ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಕೆಲವರು ಕಾಶ್ಮೀರ ಪಂಡಿತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಬಿಜೆಪಿಗೆ ಪೋಸ್ಟರ್ ಅಂಟಿಸುವ ಕೆಲಸವನ್ನು ನೀಡಿದ್ದಾರೆ. ಅಗ್ನಿಹೋತ್ರಿ(ದಿ ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕ) ಕಾಸ್ಮೀರ ಪಂಡಿತರ ಹೆಸರಿನಲ್ಲಿ ಹಣ ಗಳಿಸಿದ್ದಾರೆ. ಕಾಶ್ಮೀರಿ ಪಂಡಿತರು ಮತ್ತು ನೀವು ಪೋಸ್ಟರ್ ಗಳನ್ನು ಅಂಟಿಸಲು ಬಿಟ್ಟಿದ್ದೀರಿ, ನೀವು ಏನು ಮಾಡುತ್ತಿದ್ದೀರಿ? ಕಣ್ಣು ತೆರೆಯಿರಿ ಎಂದು ಬಿಜೆಪಿ ನಾಯಕರಿಗೆ ಹೇಳಿದ್ದಾರೆ.
ಇದಕ್ಕೂ ಮುನ್ನ ದೆಹಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಗರದಲ್ಲಿ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಕೆಲವು ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಳಿಸುವ ಬದಲು ಎಲ್ಲರಿಗೂ ಉಚಿತವಾಗುವಂತೆ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರನ್ನು ಬಿಜೆಪಿ ಕೇಳಬೇಕು ಎಂದು ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಈ ಹಿಂದೆ ರೇವಾರಿಯಲ್ಲಿ ಹರಿಯಾಣದ ಬಿಜೆಪಿ ನಾಯಕನಿಗೆ ‘ಕಾಶ್ಮೀರ ಫೈಲ್’ ಉಚಿತ ಪ್ರದರ್ಶನವನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದರು.
ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ನಿರ್ದೇಶಕರು ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸುತ್ತಿದ್ದಾರೆ ಎಂದು ಹೇಳಲು ಕೇಜ್ರಿವಾಲ್ ಅವರು ಅಗ್ನಿಹೋತ್ರಿ ಅವರ ಟ್ವೀಟ್ ಉಲ್ಲೇಖಿಸಿದ್ದಾರೆ.