ವೈವಾಹಿಕ ಸಂಬಂಧ ಮುರಿದುಕೊಂಡ ಬಗ್ಗೆ ಘೋಷಣೆ ಮಾಡಿದ ಕೆಲವು ತಿಂಗಳುಗಳ ಬಳಿಕ ಬಳಿಕ ಇದೀಗ ಐಶ್ವರ್ಯಾ ರಜನಿಕಾಂತ್ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಧನುಷ್ ಹೆಸರನ್ನು ಅಳಿಸಿ ಹಾಕಿದ್ದಾರೆ.
ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಹೆಸರು ಐಶ್ವರ್ಯಾ ರಜನಿಕಾಂತ್ ಧನುಷ್ ಎಂದಿತ್ತು. ಇದೀಗ ತಮ್ಮ ಹೆಸರಿನಿಂದ ಧನುಷ್ ಎಂಬ ಹೆಸರನ್ನು ತೆಗೆದುಹಾಕುವ ಮೂಲಕ ಈ ಜೋಡಿ ಮತ್ತೆ ಒಂದಾಗುತ್ತದೆ ಎಂಬ ವದಂತಿಗಳನ್ನು ಅಳಿಸಿಹಾಕಿದಂತಾಗಿದೆ. ಜನವರಿ 17ರಂದು ವಿಚ್ಛೇದನದ ಬಗ್ಗೆ ಐಶ್ವರ್ಯಾ – ಧನುಷ್ ಘೋಷಣೆ ಮಾಡಿದ್ದರು.
ಜನವರಿ 17ರಂದು ಧನುಷ್ ಹಾಗೂ ಐಶ್ವರ್ಯಾ ತಾವು ಬೇರ್ಪಡುತ್ತಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದರು. ಧನುಷ್ ತಂದೆ ಕಸ್ತೂರಿ ರಾಜ ಇದು ಕೇವಲ ಕುಟುಂಬದ ಜಗಳ ಎಂದು ಹೇಳಿದ್ದರು. ಇದಾದ ಬಳಿಕ ಈ ಜೋಡಿ ಮತ್ತೆ ಒಂದಾಗಬಹುದು ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ, ಈಗ ಇವೆಲ್ಲದಕ್ಕೂ ಐಶ್ವರ್ಯಾ ಫುಲ್ ಸ್ಟಾಪ್ ಇಟ್ಟಿದ್ದಾರೆ.