ಥಾಣೆ: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಹುಡುಗನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಿಬ್ಬಂದಿಯೊಬ್ಬರು ಸಮಯ ಪ್ರಜ್ಞೆ ತೋರಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ಸ್ಥಳವನ್ನು ದಾಟುವ ಕೆಲವೇ ಸೆಕೆಂಡ್ ಗಳ ಮೊದಲು ಪೊಲೀಸ್ ಸಿಬ್ಬಂದಿಯೊಬ್ಬರು ಹದಿಹರೆಯದ ಹುಡುಗನನ್ನು ರೈಲ್ವೆ ಹಳಿಯಿಂದ ದೂರ ತಳ್ಳುವ ಮೂಲಕ ಪ್ರಾಣ ಉಳಿಸಿದ್ದಾರೆ.
ರೈಲು ನಿಲ್ದಾಣದಲ್ಲಿದ್ದ ಬಾಲಕ ರೈಲ್ ಬರುವುದನ್ನು ಗಮನಿಸಿ ಹಳಿ ಮೇಲೆ ಧುಮುಕಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ಕೂಡಲೇ ಹಳಿ ಮೇಲೆ ಹಾರಿ ಹುಡುಗನನ್ನು ತಳ್ಳಿಕೊಂಡು ಮುಂದೆ ಸಾಗಿದ್ದಾರೆ. ಮರು ಕ್ಷಣದಲ್ಲೇ ರೈಲು ಸಾಗಿದೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.