ಕೀವ್: ಉಕ್ರೇನ್ ಕೀವ್ ನಗರದಲ್ಲಿ ರಷ್ಯಾ ದಾಳಿಗೆ ಪತ್ರಕರ್ತೆ ಸಾವನ್ನಪ್ಪಿದ್ದಾರೆ. ಶೆಲ್ ದಾಳಿಯಲ್ಲಿ ರಷ್ಯಾ ದೇಶಕ್ಕೆ ಸೇರಿದ ಪತ್ರಕರ್ತೆ ಮೃತಪಟ್ಟಿದ್ದಾರೆ.
‘ದಿ ಇನ್ ಸೈಡರ್’ ಪತ್ರಕರ್ತೆ ಒಕ್ಸಾನಾ ಬೌಲಿನಾ ಸಾವನ್ನಪ್ಪಿದ್ದಾರೆ. ಯುದ್ಧಪೀಡಿತ ಉಕ್ರೇನ್ ನಲ್ಲಿ ವರದಿಗಾಗಿ ತೆರಳಿದ್ದ ಅವರು ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಕ್ಷಿಪಣಿ ಪೂರೈಕೆ:
ಪ್ರಬಲ ರಷ್ಯಾ ವಿರುದ್ಧ ತಿಂಗಳಿಂದ ದಿಟ್ಟ ಹೋರಾಟ ನಡೆಸುತ್ತಿರುವ ಉಕ್ರೇನ್ ಗೆ ಆನೆ ಬಲ ಸಿಕ್ಕಿದೆ. ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನ್ ಗೆ 6000 ಕ್ಷಿಪಣಿಗಳನ್ನು ಪೂರೈಕೆ ಮಾಡಲಾಗುವುದು ಎಂದು ಯುಕೆ ತಿಳಿಸಿದೆ.
ಭದ್ರತಾ ಮಂಡಳಿಯಲ್ಲಿ ರಷ್ಯಾ ಪ್ರಸ್ತಾವನೆ ತಿರಸ್ಕಾರ
ಉಕ್ರೇನ್ ನಲ್ಲಿ ಮಾನವೀಯ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ರಷ್ಯಾದ ಪ್ರಸ್ತಾವನೆ ತಿರಸ್ಕಾರ ಮಾಡಲಾಗಿದೆ. ರಷ್ಯಾ ನಿರ್ಣಯದ ಪರವಾಗಿ ಕೇವಲ ಎರಡು ಮತ ಚಲಾವಣೆ ಆಗಿದೆ. ಭಾರತ ಸೇರಿದಂತೆ 13 ದೇಶಗಳು ಮತದಾನದಿಂದ ದೂರ ಉಳಿದಿವೆ.
ರಷ್ಯಾ ಉದ್ಯಮಿಗಳು, ರಾಜಕಾರಣಿಗೆ ನಿರ್ಬಂಧ
ರಷ್ಯಾದ ರಾಜಕಾರಣಿಗಳು, ಉದ್ಯಮಿಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿರ್ಬಂಧ ವಿಧಿಸಿದ್ದಾರೆ. ನಿರ್ಬಂಧ ವಿಧಿಸಿದ ರಷ್ಯಾದ ರಾಜಕಾರಣಿಗಳು ಮತ್ತು ಉದ್ಯಮಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗುವುದು.
ಮೃತರ ಗುರುತು ಪತ್ತೆಗೆ ಸಾಫ್ಟ್ ವೇರ್ ಬಳಕೆ
ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ರಷ್ಯಾ ಸೈನಿಕರ ಮುಖಪತ್ತೆಗೆ ಸಾಫ್ಟ್ವೇರ್ ಬಳಕೆ ಮಾಡಲಾಗುತ್ತದೆ. ಯುದ್ಧದಲ್ಲಿ ಮೃತಪಟ್ಟವರ ಮಾಹಿತಿಗಾಗಿ ಸಾಫ್ಟ್ವೇರ್ ಬಳಕೆ ಮಾಡಲಾಗುವುದು ಎಂದು ಉಕ್ರೇನ್ ಉಪಪ್ರಧಾನಿ ಐರಿನಾ ವೆರೆಶ್ ಚುಕ್ ತಿಳಿಸಿದ್ದಾರೆ. ಮುಖ ಗುರುತಿಸಲು ಸಾಫ್ಟ್ವೇರ್ ಬಳಕೆ ಮಾಡಲಾಗುತ್ತಿದೆ. ಮೃತರ ಕುಟುಂಬದವರಿಗೆ ಮಾಹಿತಿ ನೀಡಲು ಸಾಫ್ಟ್ವೇರ್ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಯುದ್ಧದ ಹೆಸರಲ್ಲಿ ರಷ್ಯಾದಿಂದ ದೌರ್ಜನ್ಯ, ಅಪರಾಧ
ಜನವಸತಿ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಉಕ್ರೇನ್ ನಲ್ಲಿ ಮರಿಯಾಫೋನ್ ನಲ್ಲಿ ದೌರ್ಜನ್ಯ ನಡೆಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ರಷ್ಯಾ ದಾಳಿ ನಡೆಸುತ್ತಿದೆ. ಯುದ್ಧದ ಹೆಸರಿನಲ್ಲಿ ರಷ್ಯಾ ಪಡೆ ಅಪರಾಧಗಳನ್ನು ಮಾಡುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ರಷ್ಯಾ ನಿರಾಕರಿಸಿದೆ.
ಮತ್ತಷ್ಟು ನಿರ್ಬಂಧ
ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಬೇಕೆಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹೇಳಿದ್ದಾರೆ. ವ್ಯಾಪಾರ ಸೇರಿದಂತೆ ಮತ್ತಷ್ಟು ನಿರ್ಬಂಧವನ್ನು ವಿಧಿಸುವಂತೆ ಜಪಾನ್ ಸೇರಿ ಅನೇಕ ದೇಶಗಳಿಗೆ ಮನವಿ ಮಾಡಿದ್ದಾರೆ.