ಸುಂಟರಗಾಳಿಗೆ ಸಿಲುಕಿ ಗಿರಗಿರನೇ ತಿರುಗಿದ ಪಿಕ್-ಅಪ್ ವಾಹನ: ಭಯಾನಕ ವಿಡಿಯೋ ವೈರಲ್ 24-03-2022 5:49AM IST / No Comments / Posted In: Latest News, Live News, International ಇತ್ತೀಚೆಗೆ, ಅಮೆರಿಕಾದ ಟೆಕ್ಸಾಸ್ನ ಎಲ್ಜಿನ್ನಲ್ಲಿ ಚಾಲಕನೊಬ್ಬ ಸುಂಟರಗಾಳಿಗೆ ಸಿಲುಕಿ ಪವಾಜಸದೃಶನಾಗಿ ಬದುಕುಳಿದಿರೋ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋ ವೈರಲ್ ಆಗಿದೆ. ಸ್ಟಾರ್ಮ್ ಚೇಸರ್ ಬ್ರಿಯಾನ್ ಎಂಫಿಂಗರ್ ಅವರು ಈ ಭಯಾನಕ ದೃಶ್ಯವನ್ನು ಸೆರೆಹಿಡಿದಿದ್ದು, ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಿಕ್-ಅಪ್ ಟ್ರಕ್ ಒಂದು ಭಯಾನಕ ಸುಂಟರಗಾಳಿಯಲ್ಲಿ ಸಿಲುಕಿ ಗಿರಗಿರನೇ ತಿರುಗಿರೋ ವಿಡಿಯೋ ವೈರಲ್ ಆಗಿದೆ. ಹಿಂಸಾತ್ಮಕ ಸುಂಟರಗಾಳಿಗೆ ಸಿಲುಕಿದ ಟ್ರಕ್ ವೊಂದು ಅದನ್ನು 360 ಡಿಗ್ರಿಗಳ ಸುತ್ತಲೂ ತಿರುಗಿಸಿದೆ. ನೋಡಲು ಭಯಾನಕ ಎಂದೆನಿಸಿದ್ರೂ, ಪವಾಡಸದೃಶವಾಗಿ ನೆಟ್ಟಗೆ ಹಿಂತಿರುಗಿದ ವಾಹನವು ಹೆದ್ದಾರಿಯಲ್ಲಿ ಚಲಿಸಿದೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, 6 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸುಂಟರಗಾಳಿಗೆ ಸಿಲುಕಿ ಒದ್ದಾಡಿ, ಬದುಕುಳಿದ ಕಾರು ಚಾಲಕನ 16 ವರ್ಷದ ಬಾಲಕ ರೆನಾಲ್ಡ್ಸ್ ಎಂಬುದಾಗಿ ಗುರುತಿಸಲಾಗಿದೆ. ಆತ ಯಾವುದೇ ರೀತಿಯಾಗಿ ಗಾಯಗೊಳ್ಳದೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. Omg… just going thru my video. This is a story about a red truck and a tornado…. I CANNOT believe they drove away like that. #txwx #tornado pic.twitter.com/8h0nD88xFv — Brian Emfinger (@brianemfinger) March 22, 2022