‘ಫ್ಯಾಮಿಲಿ ಮ್ಯಾನ್’ ಖ್ಯಾತಿಯ ನಟಿ ಸಮಂತಾ ರುತ್ ಪ್ರಭು ತಮ್ಮ ಮಾಜಿ ಪತಿ ನಾಗಚೈತನ್ಯರಿಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಕೊಕ್ ನೀಡಿದ್ದಾರೆ. ಹೌದು..! ನಟಿ ಸಮಂತಾ ನಾಗಚೈತನ್ಯರನ್ನು ಇನ್ಸ್ಟಾದಲ್ಲಿ ಅನ್ಫಾಲೋ ಮಾಡಿದ್ದಾರೆ.
400 ಕ್ಕೂ ಅಧಿಕ ಖಾತೆಗಳನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿರುವ ನಟಿ ಸಮಂತಾ ಈಗಾಗಲೇ ನಾಗಚೈತನ್ಯ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಪ್ರೊಫೈಲ್ನಿಂದ ಅಳಿಸಿ ಹಾಕಿದ್ದರು. ಇದೀಗ ನಾಗಚೈತನ್ಯರನ್ನು ಇನ್ಸ್ಟಾಗ್ರಾಂನಲ್ಲಿ ಅನ್ಫಾಲೋ ಮಾಡಿದ್ದಾರೆ.
‘ಮಜಿಲಿಯೇ ಮಾಯ ಚೇಸಾವೆ’ ಹಾಗೂ ‘ಆಟೋನಗರ ಸೂರ್ಯ’ ಮುಂತಾದ ಸಿನಿಮಾಗಳಲ್ಲಿ ಸಹನಟರಾಗಿ ನಟಿಸಿದ್ದ ಸಮಂತಾ ಹಾಗೂ ನಾಗಚೈತನ್ಯ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ವರ್ಷ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಅಕ್ಕಿನೇನಿ ಎಂಬ ಉಪನಾಮವನ್ನು ಅಳಿಸಿ ಹಾಕಿದ್ದರು. ಇದಾದ ಬಳಿಕ ಅನೇಕರು ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿರಬಹುದು ಎಂದು ಶಂಕಿಸಿದ್ದರು. ಅದರಂತೆ, ಸಮಂತಾ ಹಾಗೂ ನಾಗಚೈತನ್ಯ ಜಂಟಿ ಹೇಳಿಕೆಯ ಮೂಲಕ ತಾವು ಬೇರ್ಪಡುವ ಬಗ್ಗೆ ಮಾಹಿತಿ ನೀಡಿದ್ದರು.