ಜಗತ್ತಿನಲ್ಲಿ ಚಿತ್ರವಿಚಿತ್ರ ರೆಸ್ಟೋರೆಂಟ್ ಗಳಿವೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ರೆಸ್ಟೋರೆಂಟ್ ಕೂಡ ಇವುಗಳಲ್ಲೊಂದು. ಇಲ್ಲಿ ರುಚಿಕರ ತಿನಿಸುಗಳು ಸಿಗಬೇಕು ಅಂದ್ರೆ ವೇಯ್ಟರ್ ಗಳಿಂದ ಬೈಗುಳವನ್ನೂ ತಿನ್ನಬೇಕು. ಈ ರೆಸ್ಟೋರೆಂಟ್‌ನಲ್ಲಿರುವ ವೇಯ್ಟರ್ ಗಳು ಗ್ರಾಹಕರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ತಾರೆ. ತಿನಿಸುಗಳಿಗಾಗಿ ಆರ್ಡರ್ ಮಾಡುತ್ತಿದ್ದಂತೆ ಗ್ರಾಹಕರನ್ನು ಅವಮಾನಿಸ್ತಾರೆ.
ಗ್ರಾಹಕರನ್ನು ಅವಮಾನಿಸಿದರೂ ಈ ರೆಸ್ಟೋರೆಂಟ್ ಮೆಚ್ಚುಗೆ ಗಳಿಸ್ತಾ ಇದೆ. ಈ ರೆಸ್ಟೋರೆಂಟ್ ನ ಹೆಸರು ಕರೆನ್ಸ್ ಡೈನರ್. ಈ ರೆಸ್ಟೋರೆಂಟ್‌ನ ಧ್ಯೇಯ ವಾಕ್ಯವೆಂದರೆ ಗ್ರೇಟ್ ಫುಡ್, ಟೆರಿಬಲ್ ಸರ್ವಿಸ್. ಅಂದರೆ ರುಚಿಕರವಾದ ಆಹಾರದ ಜೊತೆಗೆ ವಿಚಿತ್ರ ಸೇವೆಯನ್ನು ನೀಡಲಾಗುತ್ತದೆ. ವೇಯ್ಟರ್ ಗಳು ಕೆಟ್ಟದಾಗಿ ವರ್ತಿಸಿದಾಗ ಗಿರಾಕಿಗಳೂ ನಗುತ್ತಾರೆ, ತಮಾಷೆ ಮಾಡುತ್ತಾರೆ.
ಬ್ರಿಟನ್ ನಲ್ಲೂ ಕರೆನ್ಸ್ ಡೈನರ್ ಹೆಸರಿನ ಈ ರೆಸ್ಟೋರೆಂಟ್ ಓಪನ್ ಆಗಿದೆ. ಬೇರೆ ಬೇರೆ ನಗರಗಳಲ್ಲೂ ರೆಸ್ಟೋರೆಂಟ್ ಆರಂಭಿಸಲು ತಯಾರಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮಗಳ ಜೊತೆಗೆ ಈ ರೆಸ್ಟೋರೆಂಟ್ ಗೆ ಬಂದಿದ್ದ. ಆತನ ಪುತ್ರಿಯ ಕೂದಲನ್ನು ನೋಡಿ ವೇಯ್ಟರ್ ಗಳು ಹಾಸ್ಯ ಮಾಡಿದ್ದಾರಂತೆ. ಇದ್ರಿಂದ ಬೇಸರ ಮಾಡಿಕೊಂಡ ಅವರಿಬ್ಬರೂ ಅಲ್ಲಿಂದ ಎದ್ದು ಬಂದಿದ್ದಾರೆ.
ಕೂಡಲೇ ಗ್ರಾಹಕರನ್ನು ಸಮಾಧಾನಪಡಿಸಿದ ಹೋಟೆಲ್ ಮಾಲೀಕ, ತಮ್ಮ ರೆಸ್ಟೋರೆಂಟ್ ನ ಧ್ಯೇಯವಾಕ್ಯದ ಬಗ್ಗೆ ಅವರಿಗೆ ವಿವರಿಸಿದ್ದಾನೆ. ಯಾರು ಯಾರಿಗೆ, ಏನು ಬೇಕಾದ್ರೂ ಹೇಳುವ ಸ್ವಾತಂತ್ರ್ಯವನ್ನು ಕೊಡ್ತಿದ್ದೇನೆ ಅಂತಾ ಮಾಲೀಕ ಹೇಳಿದ್ದಾನೆ. ತನಗಾದ ಅನುಭವವನ್ನು ಗ್ರಾಹಕ ಹಂಚಿಕೊಂಡಿದ್ದ.