ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಸಮಾಧಾನಕರ ಸುದ್ದಿಯಿದೆ. ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ನೀಡಿದ್ದ ಕೊನೆಯ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ. ಹೊಸ ಗಡುವಿನ ಪ್ರಕಾರ ರೇಶನ್ ಕಾರ್ಡ್ ಹೊಂದಿರುವವರು 2022ರ ಜೂನ್ 30ರೊಳಗೆ ಅದನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕು.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಮೊದಲು ಆಧಾರ್ ಹಾಗೂ ಪಡಿತರ ಚೀಟಿ ಲಿಂಕ್ ಮಾಡುವ ಪ್ರಕ್ರಿಯೆಗೆ ಮಾರ್ಚ್ 31 ಕೊನೆಯ ದಿನಾಂಕವೆಂದು ಸರ್ಕಾರ ಹೇಳಿತ್ತು. ಕೇಂದ್ರ ಸರ್ಕಾರ ‘ಒನ್ ನೇಷನ್ ಒನ್ ರೇಶನ್ ಕಾರ್ಡ್ ‘ ಎಂಬ ಯೋಜನೆ ಆರಂಭಿಸಿದೆ. ಇದರ ಅಡಿಯಲ್ಲಿ ದೇಶದ ಲಕ್ಷಾಂತರ ಜನರು ಪ್ರಯೋಜನ ಪಡೆಯುತ್ತಿದ್ದಾರೆ.
ಪಡಿತರ ಚೀಟಿ ಹೊಂದಿರುವವರಿಗೆ ಆಹಾರ ಧಾನ್ಯಗಳ ವಿತರಣೆಯ ಜೊತೆಗೆ ಇನ್ನೂ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡುವ ಮೂಲಕ ನೀವು ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಯ ಲಾಭವನ್ನು ಪಡೆಯಬಹುದು. ದೇಶದ ಯಾವುದೇ ರಾಜ್ಯದ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಬಹುದು.
1. ರೇಷನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮಾಡಲು ಮೊದಲು ಅಧಿಕೃತ ವೆಬ್ಸೈಟ್ uidai.gov.in ಗೆ ಹೋಗಿ.
2. ‘Start Now’ ಮೇಲೆ ಕ್ಲಿಕ್ ಮಾಡಿ.
3. ಇಲ್ಲಿ ನಿಮ್ಮ ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.
4. ಬಳಿಕ ‘ರೇಷನ್ ಕಾರ್ಡ್ ಬೆನಿಫಿಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
5. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಭರ್ತಿ ಮಾಡಿ.
6. ಅದನ್ನು ಭರ್ತಿ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
7. ಇಲ್ಲಿ OTP ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಪರದೆಯ ಮೇಲೆ ಪ್ರಕ್ರಿಯೆ ಪೂರ್ಣಗೊಂಡ ಸಂದೇಶ ಬರುತ್ತದೆ.
8. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ, ನಿಮ್ಮ ಆಧಾರ್ ಅನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ಆಧಾರ್ ಅನ್ನು ನಿಮ್ಮ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲಾಗುತ್ತದೆ.
ಈ ಪ್ರಕ್ರಿಯೆಗಾಗಿ ನೀವು ಆಧಾರ್ ಕಾರ್ಡ್ ನಕಲು, ಪಡಿತರ ಚೀಟಿಯ ಪ್ರತಿ ಮತ್ತು ಪಡಿತರ ಚೀಟಿದಾರರ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಪಡಿತರ ಕೇಂದ್ರಕ್ಕೆ ಸಲ್ಲಿಸಬೇಕು. ಇದಲ್ಲದೆ, ನಿಮ್ಮ ಆಧಾರ್ ಕಾರ್ಡ್ನ ಬಯೋಮೆಟ್ರಿಕ್ ಡೇಟಾ ಪರಿಶೀಲನೆಯನ್ನು ಸಹ ಪಡಿತರ ಚೀಟಿ ಕೇಂದ್ರದಲ್ಲಿ ಮಾಡಬಹುದು.