alex Certify ಅದ್ಧೂರಿ ಮೆರವಣಿಗೆಯಲ್ಲಿ ಪುತ್ರಿಯನ್ನು ಶಾಲೆಗೆ ಕಳಿಸಿದ ಮಾಜಿ ಶಾಸಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಧೂರಿ ಮೆರವಣಿಗೆಯಲ್ಲಿ ಪುತ್ರಿಯನ್ನು ಶಾಲೆಗೆ ಕಳಿಸಿದ ಮಾಜಿ ಶಾಸಕ…!

ಕೋವಿಡ್​ 19 ಸೋಂಕು ಆರಂಭವಾಗುತ್ತಿದ್ದಂತೆಯೇ ಬಂದ್​ ಆಗಿದ್ದ ಶಾಲಾ – ಕಾಲೇಜುಗಳು ಈಗೀಗ ಒಂದೊಂದಾಗಿಯೇ ಪುನಾರಂಭಗೊಂಡಿವೆ. ಹೀಗಾಗಿ ವರ್ಷಗಳಿಂದ ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಎನ್ನುತ್ತಿದ್ದ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ.

ಹೈದರಾಬಾದ್​​ನ ಮಾಜಿ ಶಾಸಕರೊಬ್ಬರು ಇದೇ ರೀತಿ ತಮ್ಮ ಪುತ್ರಿಯನ್ನು ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ದೊಡ್ಡ ಮೆರವಣಿಗೆಯನ್ನೇ ಮಾಡಿದ್ದಾರೆ.

ಹೈದರಾಬಾದ್​ನ ಜುಬ್ಲಿ ಹಿಲ್ಸ್​ ಕ್ಷೇತ್ರದ ಮಾಜಿ ಶಾಸಕ ವಿಷ್ಣುವರ್ಧನ್​ ರೆಡ್ಡಿ ತಮ್ಮ ಮಗಳನ್ನು ಡೋಲು, ವಾದ್ಯಗಳ ಸಮೇತ ಶಾಲೆಗೆ ಕಳುಹಿಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.
ಕಾರಿನಲ್ಲಿ ಸ್ಕೂಲಿಗೆ ಹೊರಡುತ್ತಿದ್ದ ಮಗಳು ಜನಶ್ರೀ ರೆಡ್ಡಿ ಜೊತೆಯಲ್ಲಿ ಸಾಂಪ್ರದಾಯಿಕ ವಾದ್ಯ ನುಡಿಸುವವರನ್ನು ಕರೆಯಿಸಿ ಅವರಿಂದ ವಾದ್ಯ ನುಡಿಸುವ ಮೂಲಕ ಪುತ್ರಿಯ ಶಾಲೆಯ ರಿ ಎಂಟ್ರಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...