ಬರೋಬ್ಬರಿ 21 ವರ್ಷದ ಹಳೆ ಸಂದೇಶವು ಬಾಟಲಿಯಲ್ಲಿ ಬಹಾಮಾಸ್‌ನಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿರೋ ರೋಚಕ ಕಥೆಯಿದು.
ಹೌದು, ಬಹಾಮಾಸ್‌ನಿಂದ ಅಟ್ಲಾಂಟಿಕ್ ಸಮುದ್ರಯಾನವನ್ನು ಮಾಡಿದ 21 ವರ್ಷದ ಹಳೆ ಸಂದೇಶವನ್ನು ಹೊಂದಿರುವ ಬಾಟಲಿಯ ಮೇಲೆ ಇಂಗ್ಲೆಂಡ್‌ನ ಬೀಚ್‌ಗೆ ಹೋಗುವವರು ಎಡವಿ ಬಿದ್ದಿದ್ದಾರೆ. ಇಂಗ್ಲೆಂಡ್‌ನ ಫಾಲ್ಮೌತ್‌ನಲ್ಲಿರುವ ಕ್ಯಾಸಲ್ ಬೀಚ್ ನಲ್ಲಿ ನಡೆಯುತ್ತಿದ್ದ ಕ್ರಿಸ್ಪಿನ್ ಬೆಂಟನ್ ಅವರಿಗೆ ಸಂದೇಶವಿದ್ದ ಈ ಬಾಟಲಿ ಸಿಕ್ಕಿದೆ.
ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡ ಅವರಿಗೆ ಅದರೊಳಗೆ ಸಂದೇಶವಿರುವುದು ತಿಳಿದು ಅದನ್ನು ತೆರೆದಿದ್ದಾರೆ. ಇದರ ಫೋಟೋವನ್ನು ಛಾಯಾಗ್ರಾಹಕ ಬೆಂಟನ್ ಕ್ಲಿಕ್ಕಿಸಿದ್ದಾರೆ. ನಂತರ ಇಬ್ಬರು ಕೂಡ ಸಂದೇಶದಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಓದಿದ್ದಾರೆ.
ಇದು ಕೆನಡಾದ ಪುಟ್ಟ ಬಾಲಕಿ ಬರೆದ ಪತ್ರವಾಗಿತ್ತು. ಕೈಬರಹದ ಪತ್ರವನ್ನು 2001 ರಲ್ಲಿ ಬರೆಯುವ ಸಮಯದಲ್ಲಿ ಬಾಲಕಿ ಅನ್ನಾ ಎಂಬಾಕೆಗೆ 6 ವರ್ಷ ವಯಸ್ಸಾಗಿತ್ತು. ಜೂನ್ 21, 2001 ರಂದು ಕೆನಡಾದಿಂದ ಬಹಮಾಸ್ ಗೆ ಪತ್ರ ಬರೆದಿದ್ದಾಳೆ ಎಂಬುದು ಸಂದೇಶದಲ್ಲಿ ಬರೆಯಲಾಗಿದೆ.
ಪತ್ರದಲ್ಲಿ ಆಕೆ ದಯವಿಟ್ಟು ಮಾಲಿನ್ಯ ಮಾಡಬೇಡಿ ಎಂದು ಕೋರಿದ್ದಾಳೆ. ಈ ಸಂದೇಶವನ್ನು ಪಡೆದವರು ದಯವಿಟ್ಟು ತನಗೆ ಪತ್ರ ಬರೆಯಿರಿ ಎಂದು ಕೇಳಿಕೊಂಡಿದ್ದಾಳೆ.
ಜನವರಿಯಲ್ಲಿ, ಐರ್ಲೆಂಡ್‌ನ ಡೂಯಿ ಪೆನಿನ್ಸುಲಾದಲ್ಲಿ ದಂಪತಿಗಳು ಬೀಚ್‌ಸೈಡ್‌ನಲ್ಲಿ ನಡೆದಾಡುವಾಗ ಇದೇ ರೀತಿಯಾಗಿ ಪತ್ರ ದೊರೆತಿತ್ತು. ರೀಟಾ ಸಿಮಂಡ್ಸ್ ಮತ್ತು ಸಿಯಾರನ್ ಮಾರೋನ್ ಎಂಬುವವರಿಗೆ ಸಶಾ ಎಂಬ 11 ವರ್ಷದ ಬಾಲಕಿ ಬರೆದಿದ್ದ ಸಂದೇಶವನ್ನು ಹೊಂದಿರುವ ಬಾಟಲಿ ಸಿಕ್ಕಿತ್ತು. ಇದನ್ನು ಅಮೆರಿಕಾದ ಮೇರಿಲ್ಯಾಂಡ್‌ನ ಕರಾವಳಿ ನಗರದಿಂದ ಸಶಾ ಕಳುಹಿಸಿದ್ದಳು.