ನೀವು ಎಂದಾದರೂ ಕುದುರೆ ಈಜುವುದನ್ನು ನೋಡಿದ್ದೀರಾ? ಅರೆ ಕುದುರೆಗಳು ಸಹ ಈಜುತ್ತವೆಯೇ ಅಂತಾ ಆಶ್ಚರ್ಯವಾಗುತ್ತಿದೆಯಾ..? ಹೌದು, ಕುದುರೆಗಳು ಸಹ ಬಹಳ ಚೆನ್ನಾಗಿ ಈಜುತ್ತವೆ. ನಿಜವಾಗಿ ಹೇಳಬೇಕೆಂದರೆ ಅವು ಸಮರ್ಥ ಈಜುಗಾರರಾಗಿವೆ. ಅದರ ಬೃಹತ್ ಶ್ವಾಸಕೋಶದ ಕಾರಣದಿಂದಾಗಿ ನೀರಿನಲ್ಲಿ ತೇಲುವಂತೆ ಕಾಣುತ್ತದೆ.
ಕುದುರೆಗಳು ನೀರಿನಾಳದಲ್ಲಿ ಉಸಿರಾಡಲು ಸಾಧ್ಯವಾಗದ ಕಾರಣ, ಅವು ಸಾಮಾನ್ಯವಾಗಿ ತಮ್ಮ ತಲೆಯನ್ನು ಮೇಲ್ಮೈ ಮೇಲೆ ಇರಿಸಿಕೊಳ್ಳುತ್ತವೆ. ಅದರ ಬಾಯಿ ಮತ್ತು ಮೂಗನ್ನು ನೀರಿನ ಮೇಲೆ ಇಡುವುದರಿಂದ ಅವುಗಳಿಗೆ ಉಸಿರಾಡಲು ಸಾಧ್ಯವಾಗುತ್ತದೆ.
ಈಜು ಕುದುರೆಗಳಿಗೆ ವ್ಯಾಪಕವಾದ ಪ್ರಯೋಜನಗಳನ್ನು ಒದಗಿಸುವುದ ಜೊತೆಗೆ ಮೋಜಿನ ಮನರಂಜನಾ ಚಟುವಟಿಕೆಯಾಗಿದೆ. ಇದೀಗ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಂದು ಬಣ್ಣದ ಕುದುರೆ ಈಜುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪೋಷಕರನ್ನು ನಿರ್ಲಕ್ಷಿಸಿದ ಮಕ್ಕಳಿಗೆ ಬಿಗ್ ಶಾಕ್: ಆಸ್ತಿ ವಾಪಸ್
ಕುದುರೆ ಕೂಡ ಈಜುವುದನ್ನು ಆನಂದಿಸುತ್ತಿರುವಂತೆ ತೋರುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಅಲ್ಲದೆ ಕುದುರೆ ಈಜುವುದನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಇದೊಂದು ಅಸಾಮಾನ್ಯ ದೃಶ್ಯ ಅಂತಾ ಕರೆದಿದ್ದಾರೆ.