ಕೋಲಾರ: ನಗರದ ಕುರುಬರಪೇಟೆ ಸಮೀಪ ರಸ್ತೆ ಮಧ್ಯದಲ್ಲಿ ಹುಟ್ಟುಹಬ್ಬ ಆಚರಿಸಿ ರಂಪಾಟ ಮಾಡಿದ ಯುವಕರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ರೀತಿ ಪುಂಡಾಟಿಕೆ ಮೆರೆದ ಯುವಕರನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಕುರುಬರ ಪೇಟೆ ರಸ್ತೆ ಮಧ್ಯದಲ್ಲಿ ಶ್ರೀಕಾಂತ್, ಅನಿಲ್ ಹಾಗೂ ಸ್ನೇಹಿತರು ಹುಟ್ಟುಹಬ್ಬ ಆಚರಿಸಿದ್ದು, ರಂಪಾಟ ಮಾಡಿ ವಾಹನ ಸಂಚಾರಕ್ಕೆ ಅಡಚಣೆ ಉಂಡು ಮಾಡಿದ್ದಾರೆ. ಅಲ್ಲದೇ, ತಡೆಯಲು ಹೋದ ಪೊಲೀಸರ ಮೇಲೆಯೇ ಯುವಕರು ಹಲ್ಲೆಗೆ ಯತ್ನಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಕೋಲಾರ ನಗರ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.