ರಂಗು-ರಂಗಿನ ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಹೋಳಿ ಭಾರತದಲ್ಲಿ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಜನರು ಹೋಳಿ ಹಬ್ಬದಂದು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ. ಹೋಳಿ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬಹಳ ಪ್ರಸಿದ್ಧಿ ಪಡೆದಿದೆ.
ಹೋಳಿ ಕೇವಲ ಮನರಂಜನೆಯಲ್ಲ. ಶಾಸ್ತ್ರಗಳಲ್ಲೂ ಇದಕ್ಕೆ ಮಹತ್ವ ನೀಡಲಾಗಿದೆ. ಹಬ್ಬದಂದು ಕೆಲ ಮಹತ್ವದ ಕೆಲಸ ಮಾಡಿದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಈ ಬಾರಿ ಮಾರ್ಚ್ 17 ಮತ್ತು 18ರಂದು ಹೋಳಿ ಆಚರಣೆ ಮಾಡಲಾಗ್ತಿದೆ.
ಹೋಳಿ ಹಬ್ಬದ ದಿನ ಕೆಲವೊಂದು ಕೆಲಸಗಳನ್ನು ಅಗತ್ಯವಾಗಿ ಮಾಡ್ಬೇಕು. ದಂಪತಿ ಮಲಗುವ ಕೋಣೆಯಲ್ಲಿ ಹೋಳಿ ಹಬ್ಬದ ದಿನ ರಾಧಾ-ಕೃಷ್ಣರ ಫೋಟೋವನ್ನು ಇಡಬೇಕು. ಇದ್ರಿಂದ ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಿ,ವಿರಸ ದೂರವಾಗುತ್ತದೆ.
ಕುಟುಂಬಸ್ಥರಿಗೆ ಖಾಯಿಲೆ ಬರಬಾರದು ಎನ್ನುವವರು ಹಾಗೂ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ತುಂಬಿರಬೇಕೆನ್ನುವವರು ಹೋಳಿ ಹಬ್ಬದ ದಿನ ಮನೆ ಬಾಗಿಲಿನಲ್ಲಿ ಸೂರ್ಯ ದೇವನ ಚಿತ್ರ ಬಿಡಿಸಬೇಕು. ಇದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.
ಹಾಗೆ ಹೋಳಿ ದಿನ ತುಳಸಿ ಹಾಗೂ ಮನಿ ಪ್ಲಾಂಟ್ ಗಿಡವನ್ನು ಮನೆಗೆ ತರುವುದು ಶುಭಕರವಾಗಿದೆ. ಇವು ಮನೆಗೆ ಅದೃಷ್ಟ ತರುವ ಜೊತೆಗೆ ಗ್ರಹದೋಷಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗಿದೆ.