ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ ತೀರ್ಪು. ತ್ರಿಸದಸ್ಯ ಪೀಠದ ತೀರ್ಪನ್ನು ಎಲ್ಲರೂ ಪಾಲಿಸಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಹೈಕೋರ್ಟ್ ತ್ರಿಸದಸ್ಯ ಪೀಠ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಹೇಳಿದೆ. ಶಾಲೆ-ಕಾಲೇಜುಗಳಲ್ಲಿ ಸರ್ಕಾರದ ಸಮವಸ್ತ್ರಕ್ಕೆ ಆದ್ಯತೆ ನೀಡಲಾಗಿದೆ. ತೀರ್ಪುನ್ನು ಸಂತೋಷದಿಂದ ಸ್ವಾಗತಿಸುತ್ತೇನೆ ಎಂದರು.
ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಮುಸ್ಲೀಂ ನ್ಯಾಯಾಧೀಶರು ಇದ್ದರು. ಹಾಗಾಗಿ ಹೈಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ. ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋಗಲು ಅವಕಾಶವಿದೆ. ಆದರೆ ದೇಶ ಮಟ್ಟದಲ್ಲಿ ಮತ್ತೆ ಈ ವಿಚಾರ ತೆಗೆದುಕೊಂಡು ಹೋಗಿ ಹಿಂದು-ಮುಸ್ಲೀಂ ಮಧ್ಯೆ ಕಂದಕ ಮೂಡಿಸಬಾರದು. ಹಿಜಾಬ್ ಕುರಿತು ಅರ್ಜಿ ಸಲ್ಲಿಸಿದ ಆ ಆರು ವಿದ್ಯಾರ್ಥಿನಿಯರು ಹಠ ಬಿಟ್ಟು ಕಾಲೇಜಿಗೆ ಬರಲಿ. ತಮ್ಮ ಶಿಕ್ಷಣ ಮುಂದುವರೆಸಲಿ ಎಂದು ಹೇಳಿದರು.