alex Certify ಪಂಜಾಬ್‌ ನೂತನ ಸಿಎಂ ಪ್ರಮಾಣವಚನ ಸಮಾರಂಭದ ಕಾರು ಪಾರ್ಕಿಂಗ್‌ ಗಾಗಿ 40 ಎಕರೆ ಗೋಧಿ ನೆಲಸಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್‌ ನೂತನ ಸಿಎಂ ಪ್ರಮಾಣವಚನ ಸಮಾರಂಭದ ಕಾರು ಪಾರ್ಕಿಂಗ್‌ ಗಾಗಿ 40 ಎಕರೆ ಗೋಧಿ ನೆಲಸಮ

ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಮಾಜಿ ಸಂಸದ ಹಾಗೂ ಆಪ್‌ ಪಕ್ಷ ದ ಮುಖಂಡ ಭಗವಂತ್‌ ಮಾನ್‌ ಸಕಲ ಸಿದ್ಧತೆ ನಡೆಸಿದ್ದಾರೆ.

ವಿಶೇಷವೆಂದರೆ ಪ್ರಮಾಣವಚನ ಸ್ವೀಕಾರ ನಡೆಯುತ್ತಿರುವುದು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರು ಜನಿಸಿದ, ವಾಸಿಸಿದ್ದ ಖಾತ್ಕರ್‌ ಕಲನ್‌ ಎಂಬ ಊರಿನಲ್ಲಿ.

ಅದಕ್ಕೂ ವಿಶೇಷ ಮತ್ತು ಅಚ್ಚರಿಯ ಸಂಗತಿ ಎಂದರೆ ಮಾನ್‌ ತಮ್ಮ ಪ್ರಮಾಣವಚನ ಸಮಾರಂಭಕ್ಕೆ ನೂರಾರು ಗಣ್ಯರನ್ನು ಆಹ್ವಾನಿಸಿದ್ದಾರೆ. ಅವರುಗಳು ಬರುವ ಕಾರುಗಳ ಪಾರ್ಕಿಂಗ್‌ ಗಾಗಿಯೇ 40 ಎಕರೆ ಸಿದ್ಧಗೊಳಿಸಲಾಗಿದೆ. ಈ 40 ಎಕರೆ ಗದ್ದೆಯಲ್ಲಿ ಸೊಂಪಾಗಿ ಬೆಳೆದು ನಿಂತಿದ್ದ ಗೋಧಿಯನ್ನು ನೆಲಸಮ ಕೂಡ ಮಾಡಲಾಗಿದೆ !

ಹೌದು, ಈಗಾಗಲೇ ಸಾಲದ ಸುಳಿಯಲ್ಲಿ ಮುಳುಗಿರುವ ಪಂಜಾಬ್‌ ಸರಕಾರದಿಂದ ಸಮಾರಂಭಕ್ಕಾಗಿ 2.61 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸ್ವಲ್ಪ ಪ್ರಮಾಣವನ್ನು ಪಾರ್ಕಿಂಗ್‌ಗಾಗಿ ಗೋಧಿ ಪೈರು ನಷ್ಟ ಮಾಡಿಕೊಂಡ ರೈತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆಯಾದರೂ, ಪೂರ್ಣ ಸತ್ಯಸಂಗತಿ ಬಯಲಾಗಿಲ್ಲ. ಒಂದು ಎಕರೆಗೆ 46 ಸಾವಿರ ರೂ. ಪರಿಹಾರವನ್ನು ಸರಕಾರ ನೀಡುತ್ತಿದೆಯಂತೆ.

BIG NEWS: IPL ನಲ್ಲಿ ಎರಡು ಮಹತ್ವದ ಬದಲಾವಣೆ ಮಾಡಿದ BCCI

ಸುಮಾರು 1 ಲಕ್ಷ ಜನರು ಆಪ್‌ ಪಕ್ಷದಿಂದ ಪಂಜಾಬಿನ ಚೊಚ್ಚಲ ಮುಖ್ಯಮಂತ್ರಿಯಾಗುತ್ತಿರುವ ಭಗವಂತ್‌ ಮಾನ್‌ ಅವರ ಪ್ರಮಾಣವಚನ ಸಮಾರಂಭದಲ್ಲಿ ಜಮಾವಣೆ ಆಗಲಿದ್ದಾರೆ ಎಂಬ ನಿರೀಕ್ಷೆಯಿದೆ. ಮಾನ್‌ ಕೂಡ ದಿಲ್ಲಿಯ ಸಂಸತ್‌ಗೆ ಭೇಟಿ ನೀಡಿ, ಸ್ಪೀಕರ್‌ ಅವರಿಗೆ ಸಂಸದ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ನೀಡಿಯಾಗಿದೆ. ಮುಂದಿನ ದಿನಗಳಲ್ಲಿ ದಿಲ್ಲಿಯಲ್ಲಿ ಸಿಎಂ ಆಗಿರುವ ಆಪ್‌ ಅಧ್ಯಕ್ಷ ಅರವಿಂದ್‌ ಕೇಜ್ರಿವಾಲ್‌ ಅವರ ಮಾರ್ಗದರ್ಶನದಲ್ಲಿ ಪಂಜಾಬಿನ ನೂತನ ಸಿಎಂ ಆಗಿ ಮಾನ್‌ ಅವರು ಹೇಗೆ ಕೆಲಸ ಮಾಡುತ್ತಾರೆ ಎಂದು ಕಾದುನೋಡುವ ಕುತೂಹಲವು ಹಲವರಿಗೆ ಇದೆ.

117 ಸೀಟುಗಳ ಪೈಕಿ 92 ಸೀಟುಗಳನ್ನು ಬಾಚಿಕೊಂಡಿರುವ ಆಪ್‌ ಪಕ್ಷವು ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್‌ ಸೇರಿ ಹಲವು ಭರವಸೆಗಳನ್ನು ಪಂಜಾಬ್‌ ಜನರಿಗೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...