alex Certify Good News: ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಇಳಿಮುಖ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಇಳಿಮುಖ

ದೇಶದಲ್ಲಿ ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣವು ಕುಸಿತ ಕಂಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧನೆಯತ್ತ ದಾಪುಗಾಲು ಇಡುತ್ತಿದೆ. ದೇಶದಲ್ಲಿ ಗರ್ಭಿಣಿಯರ ಆರೋಗ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚಿನ ಆದ್ಯತೆ ನೀಡಿದ ಕಾರಣ ತಾಯಂದಿರ ಮರಣ ಪ್ರಮಾಣವು ಕುಸಿಯಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ನೀಡಿದ ಮಾಹಿತಿ ಪ್ರಕಾರ, ತಾಯಂದಿರ ಮರಣ ಪ್ರಮಾಣದ ಅನುಪಾತವು 2016-2018ರ ಅವಧಿಯಲ್ಲಿ 113 ಇತ್ತು. ಆದರೆ, ಇದೇ ಅನುಪಾತವು 2017-2019ರ ಅವಧಿಯಲ್ಲಿ 103ಕ್ಕೆ ಕುಸಿದಿದ್ದು, ಮರಣ ಪ್ರಮಾಣದಲ್ಲಿ ಶೇ.8.8 ರಷ್ಟು ಕುಸಿತವಾಗಿದೆ. ಹಾಗಾಗಿ ಮರಣ ಪ್ರಮಾಣ ಕುಸಿತದಲ್ಲಿ 2030 ರ ವೇಳೆಗೆ ಭಾರತವು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸಲಿದೆ ಎಂದೇ ಹೇಳಲಾಗುತ್ತಿದೆ.

ಗಂಗಾ ಸ್ನಾನ ಮತ್ತಷ್ಟು ಸುಗಮ, ನದಿ ನೀರು ಸ್ನಾನಕ್ಕೆ ಯೋಗ್ಯ ಎಂದು ಕೇಂದ್ರ ಸ್ಪಷ್ಟನೆ

ಮರಣ ಪ್ರಮಾಣ ಕುಸಿಯುವಂತೆ ಮಾಡುವಲ್ಲಿ ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಸರಕಾರಗಳು ಉತ್ತಮ ಸಾಧನೆ ಮಾಡಿವೆ. ಈ ರಾಜ್ಯಗಳಲ್ಲಿ ತಾಯಂದಿರ ಮರಣ ಪ್ರಮಾಣವು ಶೇ.15ರಷ್ಟು ಕುಸಿತ ಕಂಡಿದೆ. ಹಾಗೆಯೇ, ಜಾರ್ಖಂಡ್‌, ರಾಜಸ್ಥಾನ, ಬಿಹಾರ, ಪಂಜಾಬ್‌, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಶೇ.10-15ರಷ್ಟು ಇಳಿಕೆಯಾಗಿದೆ.

ಇನ್ನು ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಹಾಗೂ ಗುಜರಾತ್‌ನಲ್ಲಿ ಶೇ.5-10ರಷ್ಟು ಕುಸಿತ ಉಂಟಾಗಿದೆ. ರಾಷ್ಟ್ರೀಯ ಆರೋಗ್ಯ ನೀತಿ (ಎನ್‌ಎಚ್‌ಪಿ) ಪ್ರಕಾರ ದೇಶದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಒಂದು ಲಕ್ಷಕ್ಕೆ 100 ಮರಣಗಳಿಗೆ ಇಳಿಸುವ ಗುರಿ ಹೊಂದಲಾಗಿದೆ. ಇದನ್ನು ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ ಸೇರಿ ಹಲವು ರಾಜ್ಯಗಳು ಸಾಧಿಸಿವೆ ಎಂದು ಸಹ ತಿಳಿದುಬಂದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...