alex Certify ಪುಷ್ಪಾ ಸಿನಿಮಾದ ‘ಶ್ರೀವಲ್ಲಿ’ ಹಾಡನ್ನು ನುಡಿಸಿದ ಮುಂಬೈ ಪೊಲೀಸ್ ಬ್ಯಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಪಾ ಸಿನಿಮಾದ ‘ಶ್ರೀವಲ್ಲಿ’ ಹಾಡನ್ನು ನುಡಿಸಿದ ಮುಂಬೈ ಪೊಲೀಸ್ ಬ್ಯಾಂಡ್

ಪುಷ್ಪಾ-ದಿ ರೈಸ್ ಚಿತ್ರದ ಹಾಡುಗಳ ಟ್ರೆಂಡ್ ಇನ್ನೂ ಕಡಿಮೆಯಾದಂತಿಲ್ಲ. ಸಿನಿಮಾ ಬಿಡುಗಡೆಯಾದ ತಿಂಗಳುಗಳ ನಂತರ ಮುಂಬೈ ಪೊಲೀಸರು ಸಹ ಪುಷ್ಪಾ ಟ್ರೆಂಡ್ ಗೆ ಸೇರಿಕೊಂಡಿದ್ದಾರೆ.

ಮುಂಬೈ ಪೊಲೀಸರ ಬ್ಯಾಂಡ್ ಆದ ಖಾಖಿ ಸ್ಟುಡಿಯೋ ಪುಷ್ಪ: ದಿ ರೈಸ್‌ನ ಶ್ರೀವಲ್ಲಿ ಹಾಡಿಗೆ ಬ್ಯಾಂಡ್ ವಾದನ ಮಾಡಿದ್ದಾರೆ. ಬ್ಯಾಂಡ್‌ನ ಕವರ್ ಅನ್ನು ಮುಂಬೈ ಪೊಲೀಸರ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗೂ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲೂ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಖಾಕಿ ಪಡೆಯ ಬ್ಯಾಂಡ್ ವಾದನವನ್ನು ಮನಸಾರೆ ಇಷ್ಟಪಟ್ಟಿದ್ದಾರೆ.

ವಿಸ್ತಾರವಾದ ಬ್ಯಾಂಡ್ ಪ್ರದರ್ಶನವು ಕ್ಲಾರಿನೆಟ್, ಆಲ್ಟೊ ಸ್ಯಾಕ್ಸೋಫೋನ್, ಕೊಳಲು, ಟ್ರಂಪೆಟ್ ಮತ್ತು ಹಲವಾರು ವಾದ್ಯಗಳನ್ನು ಒಳಗೊಂಡಿತ್ತು. ಮುಂಬೈ ಪೊಲೀಸ್ ಬ್ಯಾಂಡ್ ನ 30ಕ್ಕೂ ಹೆಚ್ಚು ಸಿಬ್ಬಂದಿ ಜೇಮ್ಸ್ ಬಾಂಡ್ ಚಲನಚಿತ್ರಗಳಿಗೆ ಥೀಮ್ ಮ್ಯೂಸಿಕ್ ಅನ್ನು ನುಡಿಸಿದ ನಂತರ 2021 ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಖ್ಯಾತಿಯನ್ನು ಗಳಿಸಿತು.

ಇದಕ್ಕೂ ಮೊದಲು, ಖಾಕಿ ಸ್ಟುಡಿಯೋ ಹಲವಾರು ಹಿಟ್ ಹಾಡುಗಳನ್ನು ಮರುಸೃಷ್ಟಿಸುವ ಮೂಲಕ ಜನರನ್ನು ರಂಜಿಸಿದೆ. ಕಿಶೋರ್ ಕುಮಾರ್ ಅವರ ‘ಮೇರೆ ಸಪ್ನೋ ಕಿ ರಾಣಿ’ ನಿಂದ ಹಿಡಿದು ‘ಏ ವತನ್ ತೇರೆ ಲಿಯೇ’ ಅಥವಾ ನೆಟ್‌ಫ್ಲಿಕ್ಸ್ ಸರಣಿಯ ಮನಿ ಹೀಸ್ಟ್‌ನಿಂದ ಜನಪ್ರಿಯಗೊಳಿಸಿದ ಇಟಾಲಿಯನ್ ಗೀತೆ ‘ಬೆಲ್ಲಾ ಸಿಯಾವೋ’ ನಂತಹ ಹಾಡುಗಳವರೆಗೆ ಎಲ್ಲವನ್ನೂ ಕೌಶಲ್ಯದಿಂದ ನುಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...