ಭಾರತೀಯ ಯೋಧರಿಗಾಗಿ ಮೊಟ್ಟ ಮೊದಲ 3ಡಿ ಮುದ್ರಿತ ಮನೆ ನಿರ್ಮಾಣ..! ಇಲ್ಲಿದೆ ಅದರ ವಿಡಿಯೋ 15-03-2022 7:51AM IST / No Comments / Posted In: Latest News, India, Live News ಭಾರತೀಯ ಸೇನೆಯ ಯೋಧರಿಗಾಗಿ ಗುಜರಾತ್ನಲ್ಲಿ ಮೊದಲ 3ಡಿ ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ. ಹೌದು, ಭಾರತೀಯ ಸೇನೆಯು ಇತ್ತೀಚೆಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿದೆ. ಗುಜರಾತ್ನ ಗಾಂಧಿನಗರದಲ್ಲಿರುವ ಸೌತ್ ವೆಸ್ಟರ್ನ್ ಏರ್ ಕಮಾಂಡ್ನಲ್ಲಿ ಮೊಟ್ಟಮೊದಲ 3ಡಿ ಮುದ್ರಿತ ಮನೆಗಳನ್ನು ನಿರ್ಮಿಸಲಾಗಿದೆ. ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು (ಎಂಇಎಸ್) ಎರಡು ಮನೆಗಳನ್ನು ನಿರ್ಮಿಸಲು ನಾಲ್ಕು ವಾರಗಳನ್ನು ತೆಗೆದುಕೊಂಡಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಇಂಜಿನಿಯರ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಅವರ ಉಪಸ್ಥಿತಿಯಲ್ಲಿ 3ಡಿ ಮುದ್ರಿತ ಮನೆಗಳನ್ನು ಉದ್ಘಾಟಿಸಲಾಯಿತು. ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ನಾಲ್ಕು ವಾರಗಳಲ್ಲಿ ಎರಡು ಮನೆಗಳನ್ನು ನಿರ್ಮಿಸಿವೆ. ಭಾರತೀಯ ಸೇನೆಯು ಹೊಸದಾಗಿ ನಿರ್ಮಿಸಲಾದ ಕ್ವಾರ್ಟರ್ಸ್ನ ಅದ್ಭುತ ಫೋಟೋಗಳನ್ನು, ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. 3ಡಿ ಪ್ರಿಂಟಿಂಗ್ ಪ್ರಕ್ರಿಯೆಯೊಂದಿಗೆ ಮನೆಗಳ ನಿರ್ಮಾಣವನ್ನು ಹೇಗೆ ಕೈಗೊಳ್ಳಲಾಗಿದೆ ಎಂಬುದರ ಕುರಿತಾದ ವೇಗದ ಆವೃತ್ತಿಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮೊದಲಿಗೆ, ಅಡಿಪಾಯವನ್ನು ಹಾಕಲಾಯಿತು. ನಂತರ ಬೃಹತ್ 3ಡಿ ಮುದ್ರಕಗಳನ್ನು ಬಳಸಿ ಮಾಡಿದ ಗೋಡೆಗಳನ್ನು ಇರಿಸಲಾಯಿತು. ಎಲ್ಲವನ್ನೂ ಒಟ್ಟಿಗೆ ಜೋಡಿಸಿ ನಂತರ ಅಂತಿಮ ಸ್ಪರ್ಶ ನೀಡಲಾಯಿತು. ವಿಡಿಯೋದಲ್ಲಿ ಮನೆಗಳ ಒಳಭಾಗವನ್ನು ಸಹ ತೋರಿಸಲಾಗಿದೆ. #WATCH how the Indian Army’s Military Engineering Services constructed two houses within four weeks using the 3D Printing Technology in construction. (Source: Indian Army) pic.twitter.com/bMf3G3aO01 — ANI (@ANI) March 14, 2022 Military Engineering Services (MES) completed the first-ever 3D Printed houses at South Western Air command at Gandhinagar, Gujarat. The 3D Printed houses were inaugurated in presence of Engineer in Chief Lt Gen Harpal Singh: Indian Army officials pic.twitter.com/k6mdOQxYCi — ANI (@ANI) March 14, 2022