alex Certify ಶಾಲಾ ಸಮವಸ್ತ್ರದಲ್ಲಿ ‘ಕಚಾ ಬಾದಮ್’ಗೆ ಸ್ಟೆಪ್ಸ್ ಹಾಕಿದ ಪುಟ್ಟ ಬಾಲೆ: ವಿಡಿಯೋ ವೈರಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಸಮವಸ್ತ್ರದಲ್ಲಿ ‘ಕಚಾ ಬಾದಮ್’ಗೆ ಸ್ಟೆಪ್ಸ್ ಹಾಕಿದ ಪುಟ್ಟ ಬಾಲೆ: ವಿಡಿಯೋ ವೈರಲ್….!

ವೈರಲ್ ಆಗಿರುವ ಕಚಾ ಬಾದಮ್ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಜನರು ಇಂಟರ್ನೆಟ್‌ನಲ್ಲಿ ರೀಲ್ಸ್ ಗಳ ಮೇಲೆ ರೀಲ್ಸ್ ಹಂಚಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಂ ರೀಲ್‌ಗಳಲ್ಲಿ  ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾಗಿದೆ. ಇದೀಗ ಈ ಹಾಡಿಗೆ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಾದ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಶಾಲಾ ಸಮವಸ್ತ್ರ ಧರಿಸಿರುವ ಪುಟ್ಟ ಬಾಲಕಿಯೊಬ್ಬಳು ಹಾಡಿಗೆ ಮುದ್ದು ಮುದ್ದಾಗಿ ಸ್ಟೆಪ್ಸ್ ಹಾಕಿದ್ದಾಳೆ. ಬಾಲೆಯ ಆರಾಧ್ಯ ನೃತ್ಯಕ್ಕೆ ನೆರೆದಿದ್ದವರು ತಲೆದೂಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೋ ಸುಂಟರಗಾಳಿ ಎಬ್ಬಿಸಿದ್ದಂತೂ ಸುಳ್ಳಲ್ಲ. ಅನೇಕರು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಬಾಲಕಿಯ ಮನೋಜ್ಞ ನೃತ್ಯವನ್ನು ಕಂಡ ನೆಟ್ಟಿಗರು ಕೊಂಡಾಡಿದ್ದಾರೆ. ಅಂಗನವಾಡಿ ಕೇಂದ್ರದ ಮುದ್ದಾದ ಪುಟ್ಟ ಹುಡುಗಿಯು ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದಾಳೆ. ಕಚಾ ಬಾದಾಮ್ ಹಾಡಿನ ಟ್ರೆಂಡ್ ಹಳ್ಳಿಗಳಿಗೂ ಆಳಾಗಿ ಇಳಿದಿದೆ ಎಂಬುದು ಇದರಿಂದ ತಿಳಿಯುತ್ತದೆ.

— Awanish Sharan 🇮🇳 (@AwanishSharan) March 13, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...