ಮಕ್ಕಳ ಜೀವನದಲ್ಲಿ ತಂದೆ ಪಾತ್ರ ದೊಡ್ಡದಿರುತ್ತದೆ. ತಂದೆಯಾದವರು ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಜವಾಬ್ದಾರಿ ತಂದೆ ಮೇಲಿರುತ್ತದೆ. ಆದ್ರೆ ಕೆಲ ತಂದೆಯಂದಿರು ರಾಕ್ಷಸರಂತೆ ನಡೆದುಕೊಳ್ತಾರೆ. ಮಕ್ಕಳನ್ನು ಪ್ರೀತಿಸುವುದಿರಲಿ ಅವರನ್ನು ಅವರ ಪಾಡಿಗೆ ಬಿಡುವುದಿಲ್ಲ. ಟಿಕ್ ಟಾಕ್ ನಲ್ಲಿ ಮಹಿಳೆಯೊಬ್ಬಳು ಪತಿಯ ರಾಕ್ಷಸ ಕೃತ್ಯದ ವಿಡಿಯೋ ಹಂಚಿಕೊಂಡಿದ್ದಾಳೆ.
ಮಲೇಷಿಯಾದ ಶಾ ಆಲಂನ ಮಹಿಳೆ ಪಂಗ್ಲಿಮಾ ಪೆರಾಂಗ್ ರಿಮೌನಾಗಾ ಹೆಸರಿನ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತನ್ನ ಐದು ವರ್ಷದ ಮಗನಿಗೆ ತಂದೆ ಬೇಕು ಎನ್ನುವ ಕಾರಣಕ್ಕೆ ಆಕೆ ಇನ್ನೊಂದು ಮದುವೆಯಾಗಿದ್ದಳಂತೆ. ಆದ್ರೆ ಆಕೆ ಎರಡನೇ ಪತಿ ಮಗನಿಗೆ ಚಿತ್ರಹಿಂಸೆ ನೀಡ್ತಾನಂತೆ. ಪತಿಗೆ ತಿಳಿಯದೆ ಮಹಿಳೆ ಮೊಬೈಲ್ ನಲ್ಲಿ ಆತನ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾಳೆ. ಮಲಮಗನಿಗೆ ಮನಸ್ಸಿಗೆ ಬಂದಂತೆ ಹೊಡೆಯುವ ತಂದೆ ಕೃತ್ಯ ಬೆಚ್ಚಿ ಬೀಳಿಸುವಂತಿದೆ.
ಮಗನನ್ನು ರಕ್ಷಿಸಲು ತಾಯಿ ಸಾಕಷ್ಟು ಪ್ರಯತ್ನ ನಡೆಸುತ್ತಾಳೆ. ಆದ್ರೆ ಯಾವುದೇ ಪ್ರಯೋಜನವಾಗುವುದಿಲ್ಲ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಒಂದು ತಿಂಗಳ ಹಿಂದೆ ಎರಡನೇ ಮದುವೆಯಾಗಿದ್ದಳಂತೆ. ಫೆಬ್ರವರಿ 25ರಂದು ಘಟನೆ ನಡೆದಿದೆ ಎನ್ನಲಾಗ್ತಿದೆ. ಆರೋಪಿ ತಂದೆ ಟ್ರಕ್ ಚಾಲಕನಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆಕಾರ್ಯ ನಡೆಸುತ್ತಿದ್ದಾರೆ.
https://www.facebook.com/groups/219080287078215/posts/263329579319952/