alex Certify ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಬಿಜೆಪಿ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಬಿಜೆಪಿ ಶಾಸಕ

ನವದೆಹಲಿ: ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೋವಿಡ್ -19 ಲಾಕ್‌ ಡೌನ್ ಸಮಯದಲ್ಲಿ ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿಯನ್ನು ಒಯ್ಯುತ್ತಿದ್ದ ಗಣೇಶ್ ಚಂದ್ರ ಚೌಹಾಣ್ ಉತ್ತರ ಪ್ರದೇಶದ ಶಾಸಕರಾಗಿದ್ದಾರೆ.

ಭಾರತೀಯ ಜನತಾ ಪಕ್ಷ(ಬಿಜೆಪಿ) ಅಭ್ಯರ್ಥಿಯಾಗಿ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನೈರ್ಮಲ್ಯ ಕಾರ್ಯಕರ್ತ ಚೌಹಾಣ್ 10,553 ಮತಗಳ ಅಂತರದಿಂದ ಗೆದ್ದಿದ್ದಾರೆ.

ಬಿಜೆಪಿ ಮತ್ತು ಜನರು ಸಾಮಾನ್ಯ ಕಾರ್ಯಕರ್ತನೂ ಎತ್ತರವನ್ನು ತಲುಪಬಹುದು ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪ್ರಧಾನಿ ಅಲಹಾಬಾದ್(ಪ್ರಯಾಗರಾಜ್) ನಲ್ಲಿ ನೈರ್ಮಲ್ಯ ಕಾರ್ಮಿಕರನ್ನು ಗೌರವಿಸಿದರು, ಅವರು ಅವರ ಪಾದಗಳನ್ನು ತೊಳೆದು, ನೈರ್ಮಲ್ಯ ಕಾರ್ಮಿಕರು ಕೀಳಲ್ಲ ಎಂಬ ಸಂದೇಶ ನೀಡಿದ್ದರು. ಅವರು ಸಮಾಜದ ಕೊಳೆಯನ್ನು ಸ್ವಚ್ಛಗೊಳಿಸುತ್ತಿದ್ದರೆ, ಅವರು ಶ್ರೇಷ್ಠರು ಎಂದು ತೋರಿಸುತ್ತದೆ ಎಂದು ಚೌಹಾಣ್ ಹೇಳಿದ್ದಾರೆ.

ಕೋವಿಡ್ -19 ಸಮಯದಲ್ಲಿ, ನಾನು ರಿಕ್ಷಾ ಚಾಲಕರಿಗಾಗಿ ವಾಹನದಲ್ಲಿ ‘ಪೂರಿ-ಸಬ್ಜಿ’ ಅನ್ನು ಸಾಗಿಸುತ್ತಿದ್ದೆ. ಬಿಹಾರದಿಂದ ಹಲವಾರು ಜನರು ಸಂತ ಕಬೀರ್ ನಗರದಲ್ಲಿ ವಾಸಿಸುತ್ತಿದ್ದಾರೆ. ನನಗೆ ಟಿಕೆಟ್ ನೀಡಿದಾಗ, ಜನರು ನನ್ನನ್ನು ಭೇಟಿಯಾಗಲು ಬಂದರು, ಅವರು ಭಾವುಕರಾಗಿದ್ದರು. ನಾನು ಗೆದ್ದ ದಿನ, ರಿಕ್ಷಾ ಚಾಲಕರು ಬಂದು ನನ್ನನ್ನು ತಬ್ಬಿಕೊಂಡರು ಎಂದು ಅವರು ಹೇಳಿದರು.

ಸಂತ ಕಬೀರ್ ನಗರ ಜಿಲ್ಲೆಯ ಧಂಘಾಟಾ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು 83,241 ಮತಗಳನ್ನು ಪಡೆದರು, ಒಟ್ಟು 38.5% ಮತಗಳನ್ನು ಅವರು ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...