ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನುಪಮ್ ದತ್ತಾ ಹತ್ಯೆಗೀಡಾದವರು. ಇಬ್ಬರು ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದು, ಅನುಪಮ್ ದತ್ತಾ ಮೃತಪಟ್ಟಿದ್ದಾರೆ.
ಪಾನಿಹಟಿ ಪುರಸಭೆಯ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕೌನ್ಸಿಲರ್ ದತ್ತಾ ಪಾನಿಹಟಿ ಪುರಸಭೆಯ ವಾರ್ಡ್ 8 ರ ಟಿಎಂಸಿ ಕೌನ್ಸಿಲರ್ ಆಗಿದ್ದು, ಅವರು ಭಾನುವಾರ ಸಂಜೆ 7.30 ರ ಸುಮಾರಿಗೆ ಉತ್ತರ ಸ್ಟೇಷನ್ ರಸ್ತೆಯ ಅಗರ್ಪಾರಾ ಟೆಂಟುಲ್ಟಾಲಾ ಪ್ರದೇಶದಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದತ್ತಾ ಅವರನ್ನು ತಕ್ಷಣವೇ ಬೆಲ್ಘಾರಿಯಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಹಿರಿಯ ತೃಣಮೂಲ ನಾಯಕ ಮತ್ತು ನೈಹಟಿಯ ಶಾಸಕ ಪಾರ್ಥ ಭೌಮಿಕ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಾನು ಬ್ಯಾರಕ್ ಪೋರ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಭೌಮಿಕ್ ಹೇಳಿದರು.ಅನುಪಮ್ ದತ್ತಾ ಈ ಪ್ರದೇಶದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು. ಇದು ಪೂರ್ವ ಯೋಜಿತ ಕೊಲೆಯಾಗಿದೆ ಎಂದು ಹೇಳಿದ್ದಾರೆ.